ಮೊದಲ ಮಹಿಳಾ ಅಧ್ಯಕ್ಷರನ್ನು ಆಯ್ಕೆ ಮಾಡಿದ ಸ್ಲೊವೇಕಿಯ

Update: 2019-03-31 16:57 GMT

ಬ್ರಟಿಸ್ಲವ (ಸ್ಲೊವೇಕಿಯ), ಮಾ. 31: ಭ್ರಷ್ಟಾಚಾರ ವಿರೋಧಿ ಹೋರಾಟಗಾರ್ತಿ ಝುಝಾನ ಕಪುಟೊವ ಸ್ಲೊವೇಕಿಯದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿಜಯಿಯಾಗಿದ್ದಾರೆ. ಅವರು ದೇಶದ ಮೊದಲ ಮಹಿಳಾ ಮುಖ್ಯಸ್ಥೆಯಾಗಿದ್ದಾರೆ.

ಯಾವುದೇ ರಾಜಕೀಯ ಅನುಭವ ಹೊಂದಿರದ ಕಪುಟೊವ, ಆಡಳಿತಾರೂಢ ಪಕ್ಷದ ಪ್ರಖ್ಯಾತ ರಾಜತಾಂತ್ರಿಕ ಮಾರೊಸ್ ಸೆಫ್ಕೊವಿಚ್‌ರನ್ನು ಎರಡನೇ ರನ್-ಆಫ್ ಮತದಲ್ಲಿ ಸೋಲಿಸಿದರು ಎಂದು ಬಿಬಿಸಿ ರವಿವಾರ ವರದಿ ಮಾಡಿದೆ.

ವಕೀಲೆಯಾಗಿ ವೃತ್ತಿ ನಡೆಸುತ್ತಿರುವ ಕಪುಟೋವ 58 ಶೇಕಡ ಮತಗಳನ್ನು ಪಡೆದರೆ, ಐರೋಪ್ಯ ಒಕ್ಕೂಟದ ಉಪಾಧ್ಯಕ್ಷ ಸೆಫ್ಕೊವಿಚ್ 42 ಶೇಕಡ ಮತಗಳನ್ನು ಗಳಿಸಿದರು.

ಎರಡು ಮಕ್ಕಳ ತಾಯಿ, 45 ವರ್ಷದ ಕಪುಟೊವ ಪ್ರೊಗ್ರೆಸಿವ್ ಸ್ಲೊವೇಕಿಯ ಪಕ್ಷದ ಸದಸ್ಯೆಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News