×
Ad

ಬಹಿರಂಗ ಚರ್ಚೆಗೆ ಬನ್ನಿ: ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಸವಾಲು

Update: 2019-03-31 23:28 IST

ವಿಶಾಖಪಟ್ಟಣಂ,ಮಾ.31: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಚರ್ಚೆಗೆ ಬರುವಂತೆ ಸವಾಲು ಹಾಕಿದ್ದಾರೆ. ಆಂಧ್ರ ಪ್ರದೇಶದಲ್ಲಿ ಟಿಡಿಪಿ ಮುಖ್ಯಸ್ಥ ಮತ್ತು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಪರ ಚುನಾವಣಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಮಮತಾ ಬ್ಯಾನರ್ಜಿ ಈ ಸವಾಲೆಸೆದಿದ್ದಾರೆ. ಮೋದಿಯವರೇ, ನೀವು ಯಾವತ್ತೂ ಮಾಧ್ಯಮಗೋಷ್ಠಿಯಲ್ಲಿ ಭಾಗವಹಿಸಿಲ್ಲ. ನೀವ್ಯಾಕೆ ಚರ್ಚೆಗೆ ಬರಬಾರದು?ವಿದೇಶಗಳಲ್ಲಿ ಇದು ಸಾಧ್ಯವಾಗಿದ್ದರೆ ನಮ್ಮಲ್ಲಿ ಯಾಕೆ ಸಾಧ್ಯವಿಲ್ಲ? ಎನ್‌ಡಿಟಿವಿಯಲ್ಲಿ ಒಂದು ಚರ್ಚೆ ಅಥವಾ ನಿಮ್ಮ ಚಾನೆಲ್‌ನಲ್ಲಿಯೂ ಆಗಬಹುದು ಎಂದು ಬ್ಯಾನರ್ಜಿ ಘೋಷಿಸಿದ್ದಾರೆ.

ವಿರೋಧ ಪಕ್ಷಗಳನ್ನು ಚರ್ಚೆಯಲ್ಲಿ ನಾನು ಪ್ರತಿನಿಧಿಸುತ್ತೇನೆ. ನಾನು ನಿಮ್ಮ ಜೊತೆ ಹೋರಾಡಲು ಸಿದ್ಧವಿದ್ದೇನೆ. ರಾಜಕೀಯವಾಗಿ ನಾನು ನಿಮ್ಮಲ್ಲಿ ಪ್ರಶ್ನೆ ಕೇಳುತ್ತೇನೆ, ನೀವು ಉತ್ತರಿಸಿ. ನೀವೂ ನನ್ನಲ್ಲಿ ಪ್ರಶ್ನೆ ಕೇಳಬಹುದು, ನಾನು ಉತ್ತರಿಸುತ್ತೇನೆ ಎಂದು ಬ್ಯಾನರ್ಜಿ ಸವಾಲೆಸೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News