ಐಪಿಎಲ್‌ಗೆ ಸೇರಿದ ಅತಿ ಕಿರಿಯ ಆಟಗಾರ ಬರ್ಮನ್
Update: 2019-03-31 23:52 IST
ಹೊಸದಿಲ್ಲಿ, ಮಾ.31: ಸನ್‌ರೈಸರ್ಸ್ ವಿರುದ್ಧದ ಪಂದ್ಯದಲ್ಲಿ ರವಿವಾರ ರಾಯಲ್ ಚಾಲೆಂಜರ್ಸ್ ತಂಡ ಬೌಲರ್ ಪ್ರಯಾಸ್ ರೇ ಬರ್ಮನ್‌ರನ್ನು ತನ್ನ 11ರ ಬಳಗದಲ್ಲಿ ಆಡಿಸುವ ಮೂಲಕ ಅತಿ ಕಿರಿಯ ಆಟಗಾರನೊಬ್ಬ ಐಪಿಎಲ್‌ಗೆ ಪ್ರವೇಶ ಮಾಡಿದಂತಾಗಿದೆ. ದುಬಾರಿ ಲೀಗ್‌ನಲ್ಲಿ ಬರ್ಮನ್ ತಮ್ಮ 16 ವರ್ಷ 157ನೇ ದಿನಗಳ ವಯಸ್ಸಿನಲ್ಲಿ ಪ್ರವೇಶ ಪಡೆಯುವ ಮೂಲಕ ಈ ಹಿಂದೆ ಅಫ್ಘಾನಿಸ್ತಾನದ ಮುಜೀಬುರ್ರಹ್ಮಾನ್ (17 ವರ್ಷ 11 ದಿನಗಳು) ಬರೆದಿದ್ದ ದಾಖಲೆಯನ್ನು ಅಳಿಸಿ ಹಾಕಿದ್ದಾರೆ.