×
Ad

ಕ್ರೀಡೆಯು ನಾಗರಿಕ ಸೇವೆಗೆ ಒಳಪಡಲಿ: ಬೇಡಿ

Update: 2019-03-31 23:52 IST

ಚಂಡಿಗಡ, ಮಾ.31: ಭಾರತದಲ್ಲಿ ಕ್ರೀಡೆಯು ವಾಣಿಜ್ಯೋದ್ಯಮಿಗಳು, ಅಧಿಕಾರಶಾಹಿಯಿಂದ ನಡೆಯುತ್ತಿದೆ. ಕ್ರೀಡೆಯನ್ನು ನಾಗರಿಕ ಸೇವೆಗೆ ಒಳಪಡಿಸಬೇಕಿದೆ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ಸದಸ್ಯ ಬಿಷನ್‌ಸಿಂಗ್ ಬೇಡಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ಸಂಜೆ ಇಲ್ಲಿ ನಡೆದ ಸ್ಪೋರ್ಟ್ಸ್ ಲಿಟರೇಚರ್ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ‘‘ಕ್ರೀಡೆಯನ್ನು ನಾಗರಿಕ ಸೇವೆಗೆ ಒಳಪಡಿಸಲು ವೇದಿಕೆ ನಿರ್ಮಾಣವಾಗಬೇಕಿದೆ. ಭಾರತದಲ್ಲಿ ಕ್ರಿಕೆಟ್‌ನ್ನು ಬಿಸಿಸಿಐ ನಿಯಂತ್ರಣ ಮಾಡುತ್ತಿದೆ. ಆದಾಗ್ಯೂ ಕ್ರಿಕೆಟ್‌ನ್ನು ನಿಯಂತ್ರಣ ಮಾಡುವ ಅಗತ್ಯವೇನು? ಅದಕ್ಕೊಂದು ಆಡಳಿತದ ಆವಶ್ಯಕತೆಯಿದೆ. ನಮಗೆ ನಿಯಂತ್ರಕರು ಬೇಕಿಲ್ಲ; ಆಡಳಿತಗಾರರು ಬೇಕಿದ್ದಾರೆ. ಆ ಕಾರಣಕ್ಕಾಗಿ ನಾವು ಯಾಕೆ ಭಾರತೀಯ ಕ್ರೀಡಾ ಸೇವೆಯನ್ನು ಹೊಂದಬಾರದು? ಈ ಆಡಳಿತವನ್ನು ಹೊಂದಲು ಸಾಧ್ಯವಾಗುವ ಸ್ಥಿತಿಯನ್ನು ನಾವು ತಲುಪಬೇಕು’’ ಎಂದು ಬೇಡಿ ಹೇಳಿದ್ದಾರೆ. ಕಾರ್ಯಕ್ರಮದ ಕುರಿತು ಮಾತನಾಡಿದ ಅವರು, ಈ ಕಾರ್ಯಕ್ರಮಗಳು ದೇಶ ಮುನ್ನಡೆಯಲು ವೇದಿಕೆ ಒದಗಿಸುತ್ತವೆ ಎಂದು ಅವರು ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News