ಬರಲಿದೆ ಪೆಟ್ರೋಲ್, ಡೀಸೆಲ್ ಎರಡೂ ಬೇಡದ ಅಂಬಾಸಡರ್ ಕಾರು !

Update: 2019-04-01 14:48 GMT

ಭಾರತದ ಅಚ್ಚುಮೆಚ್ಚಿನ ಅಂಬಾಸಡರ್ ಕಾರು ರಸ್ತೆಗಳಿಂದ ಕಣ್ಮರೆಯಾಗಿ ಎಲ್ಲರೂ ಅದರ ಇತಿಹಾಸವನ್ನು ಸ್ಮರಿಸುತ್ತಿರುವಾಗಲೇ ಅಂಬಾಸಡರ್ ಮತ್ತೆ ಭಾರತದ ರಸ್ತೆಗಿಳಿಯುವ ಶುಭ ಸುದ್ದಿ ಕೇಳಿ ಬಂದಿದೆ. 

ಆದರೆ ಗಡಿಬಿಡಿ ಮಾಡಬೇಡಿ. ಮತ್ತೆ ಅದೇ ಅಂಬಾಸಡರ್ ಕಾರು ಅಥವಾ ಹೊಸ ರೂಪದ ಕಾರು ಬಿಡುಗಡೆಯಾಗುತ್ತಿಲ್ಲ. ಅಂಬಾಸಡರ್ ಕಾರನ್ನು ಹಿಂದೂಸ್ತಾನ್ ಮೋಟಾರ್ಸ್ ನಿಂದ 2017ರಲ್ಲಿ ಖರೀದಿಸಿದ ಫ್ರೆಂಚ್ ಕಂಪೆನಿ ಪಿಎಸ್ ಎ ಪ್ಯೂಜೊ ಹೆಸರು ಮಾತ್ರ ಅಂಬಾಸಡರ್ ಇರುವ ಸಂಪೂರ್ಣ ಹೊಸ ವಾಹನವನ್ನು ಭಾರತದಲ್ಲಿ ತರಲಿದೆ ಎಂದು carandbike ವೆಬ್ ಸೈಟ್ ವರದಿ ಮಾಡಿದೆ.

ಆದರೆ ಇದು ಸಂಪೂರ್ಣ ಇಲೆಕ್ಟ್ರಿಕ್ ವಾಹನವಾಗಿರಲಿರುವುದು ಇದರ ವಿಶೇಷತೆಯಾಗಿದೆ. ಭಾರತಕ್ಕೆಂದೇ ವಿಶೇಷವಾಗಿ ತಯಾರಿಸುವ ಈ ವಾಹನ ಮೊದಲು ಕಾಂಪ್ಯಾಕ್ಟ್ ಎಸ್ ಯು ವಿ ಯಾಗಿ ಬರಲಿದ್ದು ಬಳಿಕ ಹ್ಯಾಚ್ ಬ್ಯಾಕ್ ಆವೃತ್ತಿ ಬಿಡುಗಡೆಯಾಗಲಿದೆ. ಮೊದಲ ವಾಹನ 2022 ಕ್ಕೆ ಮಾರುಕಟ್ಟೆಗೆ ಬರುವ ನಿರೀಕ್ಷೆ ಇದೆ.

ಫೋಟೋ ಕೃಪೆ : auto.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News