ಮಂಗಳೂರು: ಲೈಟ್ ಫಿಶಿಂಗ್ ವಿರುದ್ಧ ಮತ್ತೆ ಸಿಡಿದೆದ್ದ ಟ್ರಾಲ್ ಬೋಟ್, ಗಿಲ್ ನೆಟ್ ಮೀನುಗಾರರು

Update: 2019-04-04 05:52 GMT

ಮಂಗಳೂರು, ಎ.4: ಸರಕಾರಿ ಆದೇಶವನ್ನು ಉಲ್ಲಂಘಿಸಿ ಮತ್ತೆ ಲೈಟ್ ಫಿಶಿಂಗ್ ಮಾಡಿರುವ ಕೆಲವು ಮೀನುಗಾರರ ವಿರುದ್ಧ ಬಂದರ್ ದಕ್ಕೆಯಲ್ಲಿ ಇಂದು ಬೆಳಗ್ಗೆ ಟ್ರಾಲ್ ಬೋಟ್, ಗಿಲ್ ನೆಟ್ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.

 ಕಳೆದ ರಾತ್ರಿ ಲೈಟ್ ಫಿಶಿಂಗ್ ನಡೆದಿರುವ ಬಗ್ಗೆ ಮಾಹಿತಿ ಪಡೆದ ಟ್ರಾಲ್ ಬೋಟ್, ಗಿಲ್ ನೆಟ್ ಮೀನುಗಾರರು ಇಂದು ದಕ್ಕೆಯಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ಬಗ್ಗೆ ಮಾಹಿತಿ ಪಡೆದ ನಗರ ಪೊಲೀಸ್ ಉಪ ಆಯುಕ್ತ ಹನುಮಂತರಾಯ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ಮೀನುಗಾರಿಕೆಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ತಪಾಸಣೆ ನಡೆಸಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News