ಮುನ್ನೂರು: ಕೆಪಿಎಲ್-3 ಕ್ರಿಕೆಟ್ ಪಂದ್ಯಾವಳಿ

Update: 2019-04-04 07:12 GMT

ಬಂಟ್ವಾಳ, ಎ.4: ಸಜೀಪ ಮುನ್ನೂರು ಗ್ರಾಮದ ಕರ್ನಾಟಕ ಇಲೆವೆನ್ ಮೈದಾನದಲ್ಲಿ ಇತ್ತೀಚೆಗೆ ನಡೆದ ಕೆಪಿಎಲ್-3 ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಯಲ್ ಸ್ಟ್ರೈಕರ್ಸ್ ತಂಡ 3ನೇ ಬಾರಿ ಪ್ರಶಸ್ತಿ ಗಳಿಸಿದೆ.

ಫೈನಲ್ ಪಂದ್ಯದಲ್ಲಿ ಎ.ಆರ್.ಬಾಯ್ಸ್ ಮತ್ತು ರಾಯಲ್ ಸ್ಟ್ರೈಕರ್ಸ್ ತಂಡ ಸೆಣಸಿದ್ದವು.

ಟಾಸ್ ಸೋತು ಬ್ಯಾಟಿಂಗ್ ಇಳಿದ ರಾಯಲ್ ಸ್ಟ್ರೈಕರ್ಸ್ ತಂಡ 4 ಓವರ್ ಗಳಲ್ಲಿ 50 ರನ್ ಗಳಿಸಿತ್ತು. ಇದನ್ನು ಬೆನ್ನತ್ತುವಲ್ಲಿ ವಿಫಲವಾದ ಎ.ಆರ್.ಬಾಯ್ಸ್ ತಂಡ ಸೋಲೊಪ್ಪಿಕೊಂಡಿತು.

ಉತ್ತಮ ದಾಂಡಿಗ- ಇರ್ಷಾದ್ ಅಲಾಡಿ, ಉತ್ತಮ ಎಸೆತಗಾರ - ಸಮೀರ್ ಕೊಳಕೆ, ಉತ್ತಮ ಕ್ಯಾಚರ್- ಇಲ್ಯಾಸ್ ಆಲಾಡಿ, ಅತಿ ಹೆಚ್ಚು ಸಿಕ್ಸರ್-ರಪೀಕ್ ಮುನ್ನೂರು, ಉತ್ತಮ ಕೀಪರ್ - ರಿಝ್ವಾನ್ ಮುನ್ನೂರು, ಸರಣಿ ಶ್ರೇಷ್ಠ ನಿಸಾರ್ ಕೊಳಕೆ, ಉದಯೋನ್ಮುಖ ಅಟಗಾರ -ಮುನೀರ್ ಮುನ್ನೂರು ಪ್ರಶಸ್ತಿಗೆ ಪಾತ್ರರಾದರು.

ಸಮಾರೋಪ ಸಮಾರಂಭದಲ್ಲಿ ವೃಷಭ ಟೂರ್ಸ್ & ಟ್ರಾವೆಲ್ಸ್ ಮಾಲಕ ಶೋಭಿತ್ ಪೂಂಜಾ, ಟಿಂಬರ್ ವ್ಯಾಪಾರಿ ಸಿದ್ದೀಕ್ ಕೊಳಕೆ, ರಫೀಕ್ ಕರಾಂದಾಡಿ, ಅಹ್ಮದ್ ಭಾವ, ಚೆರೆ ಮೋನು, ಬದ್ರುದ್ದೀನ್ ಮುನ್ನೂರು, ಇಬ್ರಾಹಿಂ ಮುನ್ನೂರು, ಪುತ್ತುಮೋನು, ಅನ್ವರ್ ಬೇಂಕ್ಯ ಉಪಸ್ಥಿತರಿದ್ದರು.

ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ತಾಪಂ ಮಾಜಿ ಅಧ್ಯಕ್ಷ ಯಶವಂತ  ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News