3 ಧಾರವಾಹಿಗಳ ವಿರುದ್ಧ ಕಾಂಗ್ರೆಸ್ ಗರಂ: ಚು.ಆಯೋಗಕ್ಕೆ ದೂರು
Update: 2019-04-08 22:22 IST
ಹೊಸದಿಲ್ಲಿ,ಎ.8: ಮೂರು ಜನಪ್ರಿಯ ಟಿವಿ ಧಾರವಾಹಿಗಳ ವಿರುದ್ಧ ಸೋಮವಾರ ಚುನಾವಣಾ ಆಯೋಗದ ಮೆಟ್ಟಿಲನ್ನೇರಿರುವ ಮಹಾರಾಷ್ಟ್ರ ಕಾಂಗ್ರೆಸ್,ಪ್ರಧಾನಿ ನರೇಂದ್ರ ಮೋದಿ ಮತ್ತು ಅವರ ಸರಕಾರದ ಯೋಜನೆಗಳ ಪ್ರಚಾರಕ್ಕಾಗಿ ಅವುಗಳನ್ನು ಬಳಸಲಾಗುತ್ತಿದೆ ಎಂದು ಆರೋಪಿಸಿದೆ.
ಬಿಜೆಪಿ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳುವಂತೆ ಮತ್ತು ಈ ಧಾರವಾಹಿಗಳ ಪ್ರಸಾರವನ್ನು ಸ್ಥಗಿತಗೊಳಿಸುವಂತೆಯೂ ಕಾಂಗ್ರೆಸ್ ತನ್ನ ದೂರಿನಲ್ಲಿ ಆಗ್ರಹಿಸಿದೆ.
ಧಾರವಾಹಿಗಳ ನಿರ್ಮಾಪಕರು ಬಿಜೆಪಿ ಪರ ಪರೋಕ್ಷ ಪ್ರಚಾರದಲ್ಲಿ ತೊಡಗಿದ್ದಾರೆ ಎಂದು ದೂರಿರುವ ಕಾಂಗ್ರೆಸ್ ಮೋದಿಯವರ ವರ್ಚಸ್ಸನ್ನು ಹೆಚ್ಚಿಸುವ ವಿಷಯಗಳನ್ನು ಧಾರವಾಹಿಗಳಲ್ಲಿ ಸೇರಿಸಲಾಗಿದೆ ಮತ್ತು ಇದು ಮಾದರಿ ನೀತಿ ಸಂಹಿತೆಯ ಉಲ್ಲಂಘನೆಯಾಗಿದೆ ಎಂದು ಹೇಳಿದೆ.