ಗುಂಪು ಥಳಿತ ಘಟನೆಗಳಿಗಾಗಿ ಮೋದಿ ನೆನಪಿನಲ್ಲುಳಿಯುತ್ತಾರೆ: ಒವೈಸಿ

Update: 2019-04-09 11:24 GMT

ಹೊಸದಿಲ್ಲಿ, ಎ.9: “ಹಿಂಸೆಯನ್ನು ಖಂಡಿಸಬೇಕಾದ ಪ್ರಧಾನಿ ನರೇಂದ್ರ ಮೋದಿ ಅದನ್ನು ಸಮರ್ಥಿಸುತ್ತಿದ್ದಾರೆ. ಗುಂಫು ಥಳಿತ ಘಟನೆಗಳಿಗಾಗಿ ಅವರು ನೆನಪಿನಲ್ಲುಳಿಯುತ್ತಾರೆ” ಎಂದು ಆಲ್ ಇಂಡಿಯಾ ಮಜ್ಲಿಸ್-ಇತ್ತೆಹಾದುಲ್ ಮುಸ್ಲಿಮೀನ್ ಅಧ್ಯಕ್ಷ ಅಸಾದುದ್ದೀನ್ ಒವೈಸಿ ಹೇಳಿದ್ದಾರೆ.

“ಬಡವರನ್ನು ಹಾಗೂ ದುರ್ಬಲರನ್ನು ಬೆಂಬಲಿಸುವ, ಉದ್ಯೋಗ ದೊರಕಿಸಿಕೊಡುವ, ಭಾರತದ ಸೌಂದರ್ಯವನ್ನು ಅರಿತಿರುವ ಹಾಗೂ ಅದನ್ನು ಇನ್ನಷ್ಟು ಉತ್ತಮಪಡಿಸುವ ಪ್ರಧಾನಿ ನಮಗೆ ಬೇಕು. ಆದರೆ ಜನರು ಲವ್ ಜಿಹಾದ್ ಹೆಸರಿನಲ್ಲಿ ಥಳಿಸಲ್ಪಟ್ಟಾಗ ಪ್ರಧಾನಿ ಮೌನವಾಗುಳಿದರು. ದನದ ಹೆಸರಿನಲ್ಲಿ ಜನರನ್ನು ಕೊಂದಾಗ ಅವರು ತಮ್ಮ ಸಂವಿಧಾನಿಕ ಜವಾಬ್ದಾರಿಯನ್ನು ಪೂರೈಸಲು ವಿಫಲರಾದರು” ಎಂದು ಉವೈಸಿ ಆರೋಪಿಸಿದ್ದಾರೆ.

ಸೋಮವಾರ ರ್ಯಾಲಿಯೊಂದನ್ನುದ್ದೇಶಿಸಿ ಮಾತನಾಡಿದ ಅವರು, “ಪ್ರಧಾನಿಯನ್ನು ‘ಸುಳ್ಳುಗಳ ಫ್ಯಾಕ್ಟರಿ' ಎಂದರಲ್ಲದೆ ಈಗಿನ ಸಂವಿಧಾನದ ಚೌಕಟ್ಟಿನಲ್ಲಿ 370ನೇ ವಿಧಿಯನ್ನು ರದ್ದುಗೊಳಿಸುವುದು ಅಸಾಧ್ಯ ಎಂದರು.

“ಮೋದಿ ಸುಳ್ಳುಗಳ ಫ್ಯಾಕ್ಟರಿಯ ಅಧ್ಯಕ್ಷನಾಗಿದ್ದು, ಹೊಸ ಸುಳ್ಳುಗಳನ್ನು ಸೃಷ್ಟಿಸುವುದು ಮಕ್ಕಳಾಟ. ಅವರಿಗೆ ಉದ್ಯೋಗ  ಕೊಡಲು ಸಾಧ್ಯವಾಗುತ್ತಿಲ್ಲ. ಆದರೆ ಸುಳ್ಳುಗಳನ್ನು ಹರಡುತ್ತಿದ್ದಾರೆ. ಅವರು 370 ಹಾಗೂ 35ಎ ವಿಧಿಯನ್ನು ರದ್ದುಗೊಳಿಸುವುದಾಗಿ ಹೇಳುತ್ತಿದ್ದಾರೆ. ಆದರೆ ಈಗಿನ ಸಂವಿಧಾನದಂತೆ ಹಾಗೆ ಮಾಡಲು ಸಾಧ್ಯವಿಲ್ಲ, ಅವರು ಮೆಹಬೂಬಾ ಮುಫ್ತಿ ಜತೆ ಸರಕಾರ ನಡೆಸಿದರೂ 370 ವಿಧಿಯನ್ನು ಏನೂ ಮಾಡಲಾಗಿಲ್ಲ” ಎಂದು ಉವೈಸಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News