ರಫೇಲ್ ಹಗರಣದ ಅಸ್ಥಿಪಂಜರಗಳು ಒಂದೊಂದಾಗಿ ಉರುಳುತ್ತಿವೆ: ಕಾಂಗ್ರೆಸ್

Update: 2019-04-10 09:42 GMT

ಹೊಸದಿಲ್ಲಿ, ಎ.10: ಮೋದಿ ಸರಕಾರಕ್ಕೆ ಈಗ ಅಡಗಿಕೊಳ್ಳಲು “ಅಧಿಕೃತ ಗೌಪ್ಯತಾ ಕಾಯಿದೆಯಿಲ್ಲ” ಎಂದು  ರಫೇಲ್ ತೀರ್ಪು ಪುನರ್ ಪರಿಶೀಲಿಸುವಂತೆ ಕೋರಿರುವ ಅರ್ಜಿದಾರರಿಗೆ ರಫೇಲ್ ಒಪ್ಪಂದದ ಕುರಿಂತೆ ಸೋರಿಕೆಯಾದ ದಾಖಲೆಗಳನ್ನು ಬಳಸಲು ಸುಪ್ರೀಂ ಕೋರ್ಟ್ ಅನುಮತಿಸಿ ಹೊರಡಿಸಿದ ಆದೇಶದ ಬೆನ್ನಲ್ಲೇ ಕಾಂಗ್ರೆಸ್ ಪ್ರತಿಕ್ರಿಯಿಸಿದೆ.

ಸೋರಿಕೆಯಾಗಿದೆಯೆನ್ನಲಾದ  ರಫೇಲ್ ದಾಖಲೆಗಳನ್ನು ಬಳಸುವುದಕ್ಕೆ ಸರಕಾರ ಎತ್ತಿದ ಆಕ್ಷೇಪವನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.

“ಮೋದೀಜಿ ನೀವು ಓಡಬಹುದು ಹಾಗೂ ಎಷ್ಟು ಬೇಕಾದರೂ ಸುಳ್ಳು ಹೇಳಬಹುದು, ಆದರೆ ಇಂದಲ್ಲ ನಾಳೆ ಸತ್ಯ ಹೊರಬರಲಿದೆ.  ರಫೇಲ್ ಹಗರಣದ ಅಸ್ಥಿಪಂಜರಗಳು ಒಂದೊಂದಾಗಿಯೇ ಉರುಳುತ್ತಿವೆ. ಈಗ ಅಡಗಿಕೊಳ್ಳಲು ‘ಅಧಿಕೃತ ಗೌಪ್ಯತಾ ಕಾಯಿದೆಯಿಲ್ಲ’ ಎಂದು ಕಾಂಗ್ರೆಸ್ ಪಕ್ಷದ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಹೇಳಿದ್ದಾರೆ.

“ರಫೇಲ್ ಒಪ್ಪಂದದಲ್ಲಿನ ಭ್ರಷ್ಟಾಚಾರವನ್ನು ಬಯಲಿಗೆಳೆದ ಸ್ವತಂತ್ರ ಪತ್ರಕರ್ತರ ವಿರುದ್ಧ ಅಧಿಕೃತ ಗೌಪ್ಯತಾ ಕಾಯಿದೆಯನ್ವಯ ಕ್ರಮ ಕೈಗೊಳ್ಳುವುದಾಗಿ ಮೋದಿ ಬೆದರಿಕೆಯೊಡ್ಡಿದ್ದರು. ಮೋದೀಜಿ ಚಿಂತಿಸಬೇಡಿ, ನಿಮಗಿಷ್ಟವಿದ್ದರೂ ಇಲ್ಲದೇ ಇದ್ದರೂ ಈಗ ತನಿಖೆ ನಡೆಯಲಿದೆ'' ಎಂದು ಸರಣಿ ಟ್ವೀಟ್ ಗಳಲ್ಲಿ ಸುರ್ಜೇವಾಲ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News