ಜಲಿಯನ್ ವಾಲಾಬಾಗ್ ಹತ್ಯಾಕಾಂಡ ‘ನಾಚಿಕೆಗೇಡಿನ ಗುರುತು’: ಬ್ರಿಟನ್ ಪ್ರಧಾನಿ

Update: 2019-04-10 14:37 GMT

ಲಂಡನ್, ಎ.10: ಬ್ರಿಟಿಷ್ ಇಂಡಿಯನ್ ಇತಿಹಾಸದಲ್ಲಿ ಜಲಿಯನ್ ವಾಲಾಬಾಗ್ ಹತ್ಯಾಕಾಂಡ ‘ನಾಚಿಕೆಗೇಡಿನ ಗುರುತು’ ಎಂದು ಬ್ರಿಟನ್ ಪ್ರಧಾನ ಮಂತ್ರಿ ತೆರೆಸಾ ಮೇ ಹೇಳಿದ್ದಾರೆ. ಆದರೆ ಅವರು ಈ ಬಗ್ಗೆ ಕ್ಷಮೆಯಾಚಿಸಿಲ್ಲ ಎಂದು ವರದಿಯಾಗಿದೆ.

“ಏನು ನಡೆದಿದೆಯೋ ಅದಕ್ಕಾಗಿ ನಾವು ವಿಷಾದಿಸುತ್ತಿದ್ದೇವೆ” ಎಂದು ಬ್ರಿಟಿಷ್ ಪಾರ್ಲಿಮೆಂಟ್ ನಲ್ಲಿ ಮಾತನಾಡಿದ ಮೇ ಹೇಳಿದರು.

1919 ಎಪ್ರಿಲ್ 13ರಂದು ಶಾಂತರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಬ್ರಿಟಿಷ್ ಸೇನೆ ವಿನಾಕಾರಣ ಗುಂಡು ಹಾರಿಸಿತ್ತು. ಈ ಘಟನೆಯಲ್ಲಿ 400 ಮಂದಿ ಮೃತಪಟ್ಟಿದ್ದರು ಎಂದು ಬ್ರಿಟಿಷ್ ದಾಖಲೆಗಳು ಹೇಳಿದ್ದರೆ, 1000ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ ಎಂದು ಭಾರತದ ಅಂಕಿ ಅಂಶಗಳು ಹೇಳುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News