ಕನ್ಹಯ್ಯರ ಕೈಯಲ್ಲಿರುವ ಹಣವೆಷ್ಟು, ಒಟ್ಟು ಆದಾಯವೆಷ್ಟು ಗೊತ್ತಾ?

Update: 2019-04-10 16:43 GMT

ಹೊಸದಿಲ್ಲಿ,ಎ.10: ಸಿಪಿಐ ಅಭ್ಯರ್ಥಿಯಾಗಿ ಬಿಹಾರದ ಬೇಗುಸರಾಯ್ ಲೋಕಸಭಾ ಕ್ಷೇತ್ರದಿಂದ ಚುನಾವಣಾ ಕಣಕ್ಕಿಳಿದಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ಕನ್ಹಯ್ಯ ಕುಮಾರ್ ಅವರು ಕಳೆದ ಎರಡು ವರ್ಷಗಳಲ್ಲಿ ತನ್ನ ಆದಾಯ 8.5 ಲ.ರೂ.ಗಳೆಂದು ಘೋಷಿಸಿದ್ದಾರೆ. ತಾನು ನಿರುದ್ಯೋಗಿ ಎಂದೂ ಅವರು ನಾಮಪತ್ರದೊಂದಿಗೆಸಲ್ಲಿಸಿರುವ ಅಫಿದಾವತ್ತಿನಲ್ಲಿ ಉಲ್ಲೇಖಿಸಿದ್ದಾರೆ. ಅದರಲ್ಲಿ ಹೇಳಿರುವಂತೆ ಅವರ ವಿರುದ್ಧ ಐದು ಪ್ರಕರಣಗಳಿವೆ.

ಬೇಗುಸರಾಯ್ ಕಮುನಿಸ್ಟರ ಭದ್ರಕೋಟೆಯಾಗಿದೆ. ಒಂದು ಕಾಲದಲ್ಲಿ ಅದನ್ನು ‘ಬಿಹಾರದ ಲೆನಿನ್‌ಗ್ರಾಡ್’ ಎಂದು ಕರೆಯಲಾಗುತ್ತಿತ್ತು.
 ತಾನು ನಿರುದ್ಯೋಗಿಯಾಗಿದ್ದು,ಬದುಕಿಗಾಗಿ ಕೆಲವು ಫ್ರೀಲಾನ್ಸ್ ಬರವಣಿಗೆಗಳಲ್ಲಿ ತೊಡಗಿಕೊಂಡಿದ್ದೇನೆ ಮತ್ತು ವಿವಿಧ ವಿವಿಗಳಲ್ಲಿ ಅತಿಥಿ ಉಪನ್ಯಾಸಕನಾಗಿಯೂಕಾಣಿಸಿಕೊಳ್ಳುತ್ತಿದ್ದೇನೆ ಎಂದು ಕುಮಾರ್ ಹೇಳಿದ್ದಾರೆ. ತನ್ನ ಹೆಚ್ಚಿನ ಆದಾಯ ತನ್ನ ‘ಬಿಹಾರ ಟು ತಿಹಾರ’ ಪುಸ್ತಕದ ಮಾರಾಟದಿಂದ ಬರುತ್ತಿದೆ ಎಂದೂ ಅವರು ಉಲ್ಲೇಖಿಸಿದ್ದಾರೆ.

ಅಫಿದಾವತ್ತಿನಲ್ಲಿ ಹೇಳಿರುವಂತೆ ಕುಮಾರ್ 24,000 ರೂ. ಹಣವನ್ನು ಹೊಂದಿದ್ದಾರೆ. ಹೂಡಿಕೆಗಳು ಮತ್ತು ಬ್ಯಾಂಕ್ ಉಳಿತಾಯ ಖಾತೆಗಳಲ್ಲಿ ಸುಮಾರು 3,57,548ರೂ.ಗಳಿವೆ. ಅವರು ಯಾವುದೇ ಕೃಷಿಭೂಮಿಯನ್ನು ಹೊಂದಿಲ್ಲ. ಬೇಗುಸರಾಯ್‌ನಲ್ಲಿರುವ ಎರಡು ಲ.ರೂ.ವೌಲ್ಯದ ಮನೆ ಅವರ ಸ್ಥಿರಾಸ್ತಿಯಾಗಿದೆ. ಹಿಂದೆ ವರದಿಯಾಗಿದ್ದಂತೆ ಅವರತಂದೆ ಕೃಷಿಕರಾಗಿದ್ದರೆ,ತಾಯಿ ಅಂಗನವಾಡಿ ಕಾರ್ಯಕರ್ತೆಯಾಗಿದ್ದಾರೆ.

 ಬೇಗುಸರಾಯಿಯಲ್ಲಿ ತ್ರಿಕೋನ ಸ್ಪರ್ಧೆಯೇರ್ಪಟ್ಟಿದೆ. ಪ್ರಬಲ ಬಿಜೆಪಿ ನಾಯಕ ಹಾಗೂ ಕೇಂದ್ರ ಸಚಿವ ಗಿರಿರಾಜ ಸಿಂಗ್ ಮತ್ತು ಆರ್‌ಜೆಡಿಯ ತನ್ವೀರ್ ಹಸನ್ ಅವರನ್ನು ಕನ್ಹಯ್ಯರನ್ನು ಎದುರಿಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News