ಪಾಕಿಸ್ತಾನದಲ್ಲಿ ಬಾಂಬ್ ಸ್ಫೋಟ ; 14 ಸಾವು

Update: 2019-04-12 16:27 GMT

ಇಸ್ಲಾಮಾಬಾದ್, ಎ. 12: ಪಾಕಿಸ್ತಾನದ ಕ್ವೆಟ್ಟಾ ನಗರದ ಹಣ್ಣಿನ ಮಾರುಕಟ್ಟೆಯೊಂದರಲ್ಲಿ ಶುಕ್ರವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ಕನಿಷ್ಠ 16 ಮಂದಿ ಮೃತಪಟ್ಟಿದ್ದಾರೆ ಹಾಗೂ 30 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಎಎಫ್‌ಪಿ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

ಮೃತರಲ್ಲಿ 8 ಶಿಯಾ ಹಝಾರ ಜನಾಂಗೀಯರು, ಓರ್ವ ಭದ್ರತಾ ಅಧಿಕಾರಿ ಮತ್ತು ಮಾರುಕಟ್ಟೆಯ ಕೆಲಸಗಾರರು ಸೇರಿದ್ದಾರೆ.

ಬಲೂಚಿಸ್ತಾನ ರಾಜ್ಯದ ರಾಜಧಾನಿ ಕ್ವೆಟ್ಟಾದ ಹಝಾರ್‌ಗಂಜಿ ಉಪನಗರದಲ್ಲಿ ಸ್ಫೋಟ ಸಂಭವಿಸಿದೆ.

ಮುಂಜಾನೆ ಸ್ಫೋಟ ಸಂಭವಿಸುವಾಗ ಈ ಸ್ಥಳ ಜನರಿಂದ ತುಂಬಿತ್ತು ಎಂದು ಈ ಹಣ್ಣಿನ ಮಾರುಕಟ್ಟೆಯಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಅವರು ಕೂದಲೆಳೆಯ ಅಂತರದಿಂದ ಸಾವಿನಿಂದ ತಪ್ಪಿಸಿಕೊಂಡರು.

ದಾಳಿಯ ಹೊಣೆಯನ್ನು ಯಾವುದೇ ಗುಂಪು ವಹಿಸಿಕೊಂಡಿಲ್ಲ.

ಸುಮಾರು 23 ಲಕ್ಷ ಕ್ವೆಟ್ಟಾ ಜನಸಂಖ್ಯೆಯಲ್ಲಿ ಸುಮಾರು 5 ಲಕ್ಷ ಹಝಾರಾ ಜನಾಂಗೀಯರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News