ಮೋದಿ ಸರಕಾರ 5 ವರ್ಷಗಳಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸಿದೆ ಎಂದ ಧರ್ಮೇಂದ್ರ ಪ್ರಧಾನ್

Update: 2019-04-12 10:51 GMT

ಹೊಸದಿಲ್ಲಿ, ಎ.12: 5 ವರ್ಷಗಳಲ್ಲಿ ನರೇಂದ್ರ ಮೋದಿ ಸರಕಾರವು 10 ಕೋಟಿಗೂ ಅಧಿಕ ಉದ್ಯೋಗಗಳನ್ನು ಸೃಷ್ಟಿಸಿದೆ ಎಂದು ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಮೋದಿ ಸರಕಾರವು ಉದ್ಯೋಗ ಸೃಷ್ಟಿಯಲ್ಲಿ ವಿಫಲವಾಗಿದೆ ಎನ್ನುವ ವರದಿಗಳ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಅವರು ಈ ರೀತಿಯಾಗಿ ಉತ್ತರಿಸಿದರು.

“2009ರಿಂದ 2014ರವರೆಗೆ (ಯುಪಿಎ ಸರಕಾರವಿದ್ದಾಗ) ಕೇಂದ್ರದ ಇಂದಿರಾ ಆವಾಸ್ ಯೋಜನೆಯಡಿ ಒಡಿಶಾದಲ್ಲಿ 4.9 ಲಕ್ಷ ಮನೆಗಳನ್ನು ನಿರ್ಮಿಸಲಾಗಿದೆ. ನರೇಂದ್ರ ಮೋದಿ ಆಡಳಿತದ 5 ವರ್ಷಗಳಲ್ಲಿ 10 ಲಕ್ಷ ಮನೆಗಳ ನಿರ್ಮಾಣವಾಗಿದೆ. ಹೆಚ್ಚು  ಮನೆಗಳ ನಿರ್ಮಾಣದಿಂದ ಹೆಚ್ಚಿನ ಬಂಡವಾಳದ ಪರಿಣಾಮ ಹೆಚ್ಚು ಉದ್ಯೋಗಗಳು ಸೃಷ್ಟಿಯಾಗಿವೆ” ಎಂದು ಪ್ರಧಾನ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News