ಬೀದಿನಾಯಿಗಳಿಗೆ ಆಹಾರವಾದ ಶಿಶು!

Update: 2019-04-12 16:21 GMT
ಸಾಂದರ್ಭಿಕ ಚಿತ್ರ

ಕೇಂದ್ರಪಾಡಾ,ಎ.12: ಕೇಂದ್ರಪಾಡಾ ಜಿಲ್ಲಾಸ್ಪತ್ರೆಯ ಸಮೀಪದಲ್ಲಿ ರಸ್ತೆಬದಿ ಎಸೆಯಲಾಗಿದ್ದ, ಜನಿಸುವಾಗಲೇ ಮೃತಪಟ್ಟಿತ್ತೆನ್ನಲಾಗಿರುವ ಶಿಶುವೊಂದನ್ನು ಬೀದಿನಾಯಿಗಳು ತಿಂದ ಘಟನೆ ಒಡಿಶಾದಲ್ಲಿ ನಡೆದಿದೆ.

ಈ ಭೀಭತ್ಸ ದೃಶ್ಯವನ್ನು ಕಂಡ ಕೆಲವು ದಾರಿಹೋಕರು ನಾಯಿಗಳನ್ನು ಓಡಿಸಿದ್ದು,ಸ್ಥಳಕ್ಕೆ ಧಾವಿಸಿದ ಪೊಲೀಸರು ಛಿದ್ರವಿಚ್ಛಿದ್ರಗೊಂಡಿದ್ದ ಶಿಶುವಿನ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದಾರೆ.

ಶಿಶು ಜನಿಸುವಾಗಲೇ ಮೃತಪಟ್ಟಿದ್ದಂತೆ ಕಂಡು ಬಂದಿದೆ ಎಂದು ತಿಳಿಸಿದ ಪೊಲೀಸ್ ಅಧಿಕಾರಿಯೋರ್ವರು,ಶಿಶುವಿನ ಹೆತ್ತವರನ್ನು ಪತ್ತೆ ಹಚ್ಚಲು ಪ್ರದೇಶದಲ್ಲಿಯ ಆಸ್ಪತ್ರೆಗಳ ಹೆರಿಗೆ ವಾರ್ಡ್‌ಗಳ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News