‘ಐ ಝೋನ್’ ಒಪ್ಟಿಕಲ್ ಆ್ಯಂಡ್ ಸನ್‌ಗ್ಲಾಸ್ ಮಳಿಗೆ ಶುಭಾರಂಭ

Update: 2019-04-13 07:06 GMT

ಮಂಗಳೂರು, ಎ.13: ನಗರದ ಸಿಟಿ ಸೆಂಟರ್‌ನ ಐದನೆ ಮಹಡಿಯಲ್ಲಿರುವ ಸ್ಪಾರ್ ಸೂಪರ್ ಮಾರ್ಕೆಟ್ ಮುಂಭಾಗದಲ್ಲಿ ಪ್ರತಿಷ್ಠಿತ ‘ಐ ಝೋನ್’ ಒಪ್ಟಿಕಲ್ ಆ್ಯಂಡ್ ಸನ್‌ಗ್ಲಾಸ್‌ನ ನೂತನ ಮಳಿಗೆ ಶನಿವಾರ ಶುಭಾರಂಭಗೊಂಡಿತು.

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಬಿಸಿಸಿಐ)ನ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ ನೂತನ ಮಳಿಗೆಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, ಮಂಗಳೂರು ಸುತ್ತಮುತ್ತ ಸಾಕಷ್ಟು ಒಪ್ಟಿಕಲ್ ಮಳಿಗೆಗಳಿದ್ದರೂ ಕೂಡ ಅಧಿಕ ಸಂಖ್ಯೆಯಲ್ಲಿ ಜನರು ಓಡಾಡುವ ಸಿಟಿ ಸೆಂಟರ್‌ನಲ್ಲಿ ‘ಐ ಝೋನ್’ ಮಳಿಗೆ ತೆರೆಯಲ್ಪಟ್ಟಿರುವುದು ಸಂತಸದ ವಿಚಾರ. ಗ್ರಾಹಕರಿಗೆ ಸಂತೃಪ್ತಿಯ ಸೇವೆ ನೀಡುವ ಮೂಲಕ ಜನರ ಒಲವು ಗಳಿಸಲಿ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ (ಕೆಸಿಸಿಐ)ನ ಅಧ್ಯಕ್ಷ ಪಿ.ಬಿ.ಅಬ್ದುಲ್ ಹಮೀದ್, ರಚನಾ ಕೆಥೊಲಿಕ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ಮಂಗಳೂರಿನ ಬಿಎನ್‌ಐ ಇನ್‌ಸ್ಪೈರ್ ಚಾಪ್ಟರ್‌ನ ಅಧ್ಯಕ್ಷ ಮಹೇಶ್ ಕಾಮತ್ ಪಿ. ಶುಭ ಹಾರೈಸಿದರು.

ಬಿಸಿನೆಸ್ ಡೆವಲಪರ್ ಅಬ್ದುಲ್ ನಸೀರ್ ಚಾಬು ಕುದ್ರೋಳಿ, ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ಅಧ್ಯಕ್ಷ ಲಕ್ಕಿಸ್ಟಾರ್ ನಾಸಿರ್ ಉಪಸ್ಥಿತರಿದ್ದರು.

ಸ್ವಾಗತಿಸಿ ಮಾತನಾಡಿದ ‘ಐ ಝೋನ್’ ಮ್ಯಾನೇಜಿಂಗ್ ಪಾರ್ಟ್ನರ್ ಮುಹಮ್ಮದ್ ರಫೀಕ್ ಕೃಷ್ಣಾಪುರ,‘ಐ ಝೋನ್’ನಲ್ಲಿ ವಿವಿಧ ವಿನ್ಯಾಸದ, ಉತ್ಕೃಷ್ಟ ಗುಣಮಟ್ಟದ ಓಪ್ಟಿಕಲ್ ಗಳು ಲಭ್ಯವಿದ್ದು, ಕಂಪ್ಯೂಟರೀಕೃತ ಉಚಿತ ನೇತ್ರ ತಪಾಸಣೆಯೂ ಮಾಡಲಾಗುವುದು. ಮೂರು ಪ್ರತಿಷ್ಠಿತ ಬ್ರಾಂಡ್‌ನ ಸನ್‌ಗ್ಲಾಸ್ ಮತ್ತು ಓಪ್ಟಿಕಲ್‌ ಗಳಿಗೆ ಸೀಮಿತ ಅವಧಿಯವರೆಗೆ ಶೇ.25ರವರೆಗೆ ರಿಯಾಯಿತಿ ನೀಡಲಾಗುವುದು’ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News