ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ಬಿಜೆಪಿ ಸೇರಿದ ಬೆನ್ನಿಗೇ ಕಾಂಗ್ರೆಸ್ ಸೇರಿದ ಅವರ ತಂದೆ, ಸೋದರಿ

Update: 2019-04-14 11:41 GMT

ಮುಂಬೈ: ಕ್ರಿಕೆಟಿಗ ರವೀಂದ್ರ ಜಡೇಜಾ ಅವರ ಪತ್ನಿ ರಿವಾಬ ಸೋಳಂಕಿ ಬಿಜೆಪಿ ಸೇರಿ ಒಂದು ತಿಂಗಳಾಗುವಷ್ಟರಲ್ಲಿ ಜಡೇಜಾ ಅವರ ತಂದೆ ಅನಿರುಧ್‍ಸಿಂಗ್ ಜಡೇಜಾ ಹಾಗೂ ಹಿರಿಯ ಸೋದರಿ ನಯ್ನಬಾ ಕೂಡ ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಆದರೆ ಅವರು ಬಿಜೆಪಿ ಸೇರಿಲ್ಲ, ಬದಲಾಗಿ ಕಾಂಗ್ರೆಸ್ ಪಕ್ಷವನ್ನು ಸೇರಿದ್ದಾರೆ.

ಕಾಂಗ್ರೆಸ್ ಹಾಗೂ ಪಟಿದಾರ್ ಆಂದೋಲನದ ನಾಯಕ ಹಾರ್ದಿಕ್ ಪಟೇಲ್ ಅವರ ಉಪಸ್ಥಿತಿಯಲ್ಲಿ ಇಬ್ಬರೂ ಜಾಮ್ನಗರ್ ಜಿಲೆಯ ಕಲವಡ್ ಜಿಲ್ಲೆಯಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ಸೇರಿದ್ದಾರೆ. ಜಾಮ್ನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮುಲು ಕಂಡೋರಿಯಾ ಕೂಡ ಈ ಸಂದರ್ಭ ಉಪಸ್ಥಿತರಿದ್ದರು.

ಬಿಜೆಪಿ ತಾನು ರೈತರಿಗೆ, ಮಹಿಳೆಯರಿಗೆ ಮತ್ತು ಯುವಜನತೆಗೆ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಸೇರಿದ ನಂತರ ನಯ್ನಬಾ ಜಡೇಜ ಹೇಳಿದರು.

ಜಡೇಜಾ ಅವರ ಊರಾದ ಜಾಮ್ನಗರ್ ಗೆ ಮೋದಿ ಭೇಟಿ ನೀಡುವ ಮುನ್ನ ಮಾರ್ಚ್ 3ರಂದು ಅವರ ಪತ್ನಿ ರಿವಾಬಾ ಸೋಳಂಕಿ ಬಿಜೆಪಿ ಸೇರಿದ್ದರು. ಆಕೆಯನ್ನು ಕರ್ನಿ ಸೇನಾದ ಮಹಿಳಾ ಘಟಕದ ಮುಖ್ಯಸ್ಥೆಯಾಗಿ ನೇಮಕಗೊಳಿಸಿದ ಐದು ತಿಂಗಳಲ್ಲಿ ಅವರು ಬಿಜೆಪಿ ಸೇರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News