ಉಡುಪಿ: ಚುನಾವಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿಗೆ ವಾಹನ ವ್ಯವಸ್ಥೆ

Update: 2019-04-14 16:03 GMT

ಉಡುಪಿ, ಎ.14: ಜಿಲ್ಲೆಯಲ್ಲಿ ಎ.18ರಂದು ನಡೆಯುವ ಲೋಕಸಭಾ ಕ್ಷೇತ್ರದ ಚುನಾವಣೆಗೆ ಸಂಬಂಧಿಸಿದಂತೆ ಈಗಾಗಲೇ ಚುನಾವಣಾ ಕೆಲಸ ಕಾರ್ಯ ನಿರ್ವಹಿಸಲು ಜಿಲ್ಲೆಯ ವಿವಿಧ ತಾಲೂಕುಗಳಿಂದ ಅಧಿಕಾರಿ/ಸಿಬ್ಬಂದಿ, ಪಿ.ಆರ್‌ಓ, ಎಪಿಆರ್‌ಓ, ಪಿಓ ಆಗಿ ನಿಯೋಜಿಸಿ ಆದೇಶಿಸ ಲಾಗಿದ್ದು, ಈ ಸಿಬ್ಬಂದಿಗಳು ಎ.17ರಂದು ತಮಗೆ ನಿಯೋಜಿಸಿರುವ ವಿಧಾನ ಸಭಾ ಕ್ಷೆತ್ರದ ಮಸ್ಟರಿಂಗ್ ಕೇಂದ್ರದಲ್ಲಿ ಹಾಜರಾಗಬೇಕಾಗಿದೆ.

ವಿವಿಧ ತಾಲೂಕುಗಳಿಂದ ಚುನಾವಾಣಾ ಕರ್ತವ್ಯಕ್ಕೆ ತೆರಳುವ ಸಿಬ್ಬಂದಿ ತಮ್ಮ ತಾಲೂಕು ಕೇಂದ್ರಗಳಿಂದ ನಿಯೋಜಿಸಲಾದ ಮಸ್ಟರಿಂಗ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಬಸ್ ವ್ಯವಸ್ಥೆ ಮಾಡಲಾಗಿದೆ. ಎಲ್ಲ ಬಸ್‌ಗಳು ಎ.17ರಂದು ಬೆಳಗ್ಗೆ 6.30ಕ್ಕೆ ಹೊರಡಲಿದ್ದು, ನಂತರ ಬಸ್ ವ್ಯವಸ್ಥೆ ಇರುವು ದಿಲ್ಲ. ಚುನಾವಣೆ ಮುಗಿದು ಮಸ್ಟರಿಂಗ್ ಕೇಂದ್ರದಲ್ಲಿ ಇವಿಎಂ ಮತಯಂತ್ರ ಗಳನ್ನು ಹಸ್ತಾಂತರಿಸಿದ ನಂತರ, ವಾಪಸ್ ಕೇಂದ್ರಸ್ಥಾನಗಳಿಗೆ ಹೋಗಲು ಡಿ ಮಸ್ಟರಿಂಗ್ ಕೇಂದ್ರದಲ್ಲಿ ಬಸ್ ವ್ಯವಸ್ಥೆ ಮಾಡಲಾಗಿದೆ.

ಬೈಂದೂರುನಿಂದ ವಿವಿದೆಡೆ ತೆರಳುವ ಸಿಬ್ಬಂದಿಗೆ ಬೈಂದೂರು ತಾಲೂಕು ಕಚೇರಿಯಿಂದ ಬಸ್ ಹೊರಡಲಿದೆ. ಕುಂದಾಪುರದಿಂದ ವಿವಿಧೆಡೆ ತೆರಳುವ ಸಿಬ್ಬಂದಿಗೆ ಭಂಡಾರ್‌ಕರ್ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಬಸ್ ಹೊರಡಲಿದೆ. ಉಡುಪಿಯಿಂದ ವಿವಿದೆಡೆ ತೆರಳುವ ಸಿಬ್ಬಂದಿಗೆ ಸೈಂಟ್ ಸಿಸಿಲಿಯಾ ಶಿಕ್ಷಣ ಸಂಸ್ಥೆ ಬ್ರಹ್ಮಗಿರಿ ಮತ್ತು ಸಿಟಿ ಬಸ್ ನಿಲ್ದಾಣದಲ್ಲಿ ಬಸ್ ಹೊರಡಲಿದೆ. ಕಾಪುನಿಂದ ತೆರಳುವ ಸಿಬ್ಬಂದಿಗೆ ದಂಡತೀರ್ಥ ಪದವಿ ಪೂರ್ವ ಕಾಲೇಜು ಉಳಿಯಾರಗೋಳಿಯಲ್ಲಿ ಬಸ್ ನಿಲ್ಲಲಿದೆ. ಕಾರ್ಕಳದಿಂದ ತೆರಳುವ ಸಿಬ್ಬಂದಿಗೆ ಮಂಜುನಾಥ ಪೈ ಸ್ಮಾರಕ ಸರಕಾರಿ ಪ್ರಥಮ ದರ್ಜೆ ಕಾಲೇಜು, ಕಾಬೆಟ್ಟು ಕಾರ್ಕಳ ಮತ್ತು ಬಸ್ ನಿಲ್ದಾಣ ಬಂಡಿಮಠ ಕಾರ್ಕಳದಲ್ಲಿ ಬಸ್ ನಿಲುಗಡೆಯಾಗಲಿದೆ ಎಂದು ಜಿಲ್ಲಾ ಚುನಾವಣಾದಿಕಾರಿ ಹಾಗೂ ಜಿಲ್ಲಾಧಿ ಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News