ಚೆಂಬುಗುಡ್ಡೆ ಫ್ರೆಂಡ್ಸ್, ಬ್ಲಡ್ ಡೋನರ್ಸ್ ಮಂಗಳೂರು ವತಿಯಿಂದ ರಕ್ತದಾನ ಶಿಬಿರ

Update: 2019-04-14 17:45 GMT

ಉಳ್ಳಾಲ: ದಿವಂಗತ ಬಿ.ಎಮ್. ಮೊಹಮ್ಮದ್ ಮದನಿ ಸ್ಮರಣಾರ್ಥ ಚೆಂಬುಗುಡ್ಡೆ ಫ್ರೆಂಡ್ಸ್ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ಹಾಗೂ ಯೆನೆಪೋಯ ಬ್ಲಡ್ ಬ್ಯಾಂಕ್ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ ಬೃಹತ್ ರಕ್ತದಾನ ಶಿಬಿರವು ನೂರುಲ್ ಹುದಾ ಮದ್ರಸ ಚೆಂಬುಗುಡ್ಡೆ ಮಸ್ಜಿದ್ ವಠಾರದಲ್ಲಿ ರವಿವಾರ ನಡೆಯಿತು.

ಕಾರ್ಯಕ್ರಮವನ್ನು ಅಬ್ಬಾಸ್ ಮುಸ್ಲಿಯಾರ್  ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಇಬ್ರಾಹಿಮ್ ಹಾಜಿ ಅಧ್ಯಕ್ಷರು ಜುಮಾ ಮಸ್ಜಿದ್ ಚೆಂಬುಗುಡ್ಡೆ ವಹಿಸಿ, ಭಾರತದ ಸಂವಿಧಾನ ಶಿಲ್ಪಿ ಡಾ. ಅಂಬೇಡ್ಕರ್‌ ಜಯಂತಿಯನ್ನು ಪ್ರತಿ ವರ್ಷ ಎ. 14ರಂದು ಭಾರತದಾದ್ಯಂತ ಆಚರಿಸಲಾಗುತ್ತದೆ. ಅಂಬೇಡ್ಕರ್‌ ಸಾಮಾಜಿಕ ಸಮಾನತೆಗಾಗಿ ಹೋರಾಡಿದ ಭಾರತೀಯ ನಾಯಕರಲ್ಲೊಬ್ಬರು ಎಂದರು. ಅದೇ ರೀತಿ  ದಿವಂಗತ ಮೊಹಮ್ಮದ್ ಮದನಿ ಸ್ಮರಣಾರ್ಥ ಈ ಕಾರ್ಯಕ್ರಮ ಹಮ್ಮಿಕೊಂಡು ಸಮಾಜದಲ್ಲಿ ರಕ್ತದಾನದಂತಹ ಸಮಾಜ ಸೇವೆಯ ಕಾರ್ಯಕ್ರಮವನ್ನು ಆಯೋಜಿಸಿದ ಫ್ರೆಂಡ್ಸ್ ಚೆಂಬುಗುಡ್ಡೆ ಮತ್ತು ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸಮಾಜ ಸೇವೆಯನ್ನು ಶ್ಲಾಘಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಉಮರ್ ಚೆಂಬುಗುಡ್ಡೆ, ಬಾಸಿಲ್ ಡಿಸೋಜ ಕೌನ್ಸಿಲರ್ ಉಳ್ಳಾಲ ಪಂಚಾಯತ್, ಸಿದ್ದೀಕ್ ಮಂಜೇಶ್ವರ ಅಧ್ಯಕ್ಷರು ಬ್ಲಡ್ ಡೋನರ್ಸ್ ಮಂಗಳೂರು, ನೌಫಲ್ ಬಜ್ಪೆ ಬ್ಲಡ್ ಡೋನರ್ಸ್ ಮಂಗಳೂರು ಇದರ ಸೌದಿ ಅರೇಬಿಯಾ ಇದರ ಮುಖ್ಯ ಕಾರ್ಯ ನಿರ್ವಾಹಕ, ಮಹಮ್ಮದ್ ಉಳ್ಳಾಲ, ಶಬೀರ್ ಅಧ್ಯಕ್ಷರು ಫ್ರೆಂಡ್ಸ್ ಚೆಂಬುಗುಡ್ಡೆ, ಅಕ್ಬರ್, ಸಲೀಂ ಉಪಾಧ್ಯಕ್ಷರು ಫ್ರೆಂಡ್ಸ್ ಚೆಂಬುಗುಡ್ಡೆ,  ಆಲ್ತಾಫ್ ಚೆಂಬುಗುಡ್ಡೆ ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ವಿಶೇಷವಾಗಿ ಫ್ರೆಂಡ್ಸ್ ಚೆಂಬುಗುಡ್ಡೆ ತಂಡವು ಸ್ಥಳೀಯ ಮಸೀದಿಗೆ ಮಯ್ಯತ್ ದಫನ್ ಮಾಡಲು ಕೃತಕ ನಿರ್ಮಿತ ಕೊಠಡಿ  ದಾನವಾಗಿ ನೀಡಿದರು.

ಕೋಲಾರ ಮೂಲಬಾಗಿಲಿನಿಂದ ಉಳ್ಳಾಲ ದರ್ಗಾ ಝಿಯಾರತ್ ಗಾಗಿ ಬಂದ ಇಬ್ಬರು ಯುವಕರು  ರಕ್ತದಾನ ಮಾಡಿದರು. ಒಟ್ಟು 78 ರಕ್ತದಾನಿಗಳು ಸ್ವಯಂ ಪ್ರೇರಿತವಾಗಿ ರಕ್ತದಾನ ಮಾಡಿದರು. ರಕ್ತದಾನ ಮಾಡಿದ ರಕ್ತದಾನಿಗಳನ್ನು ಬ್ಲಡ್ ಡೋನರ್ಸ್ ಮಂಗಳೂರು ಇದರ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು ತಂಡದ ಸದಸ್ಯರಾದ ಫಯಾಝ್ ಮಾಡೂರು, ಮುನೀರ್ ಚೆಂಬುಗುಡ್ಡೆ, ಫಾರೂಕ್ ಬಿಗ್ ಗ್ಯಾರೇಜ್, ನವಾಝ್ ಕಲ್ಲರಕೋಡಿ, ಮಾಸ್ಟರ್ ಫಾಝಿಲ್, ಸಲಾಮ್ ಚೆಂಬುಗುಡ್ಡೆ, ರಝಾಕ್ ಸಲ್ಮಾರ್ ಇನ್ಮಿತರರು ಭಾಗವಹಿಸಿದರು.

ಕಾರ್ಯಕ್ರಮ ವನ್ನು ಮುನೀರ್ ಚೆಂಬುಗುಡ್ಡೆ ನಿರೂಪಿಸಿದರು,  ಬ್ಲಡ್ ಡೋನರ್ಸ್ ಮಂಗಳೂರು ಅಧ್ಯಕ್ಷ ಸಿದ್ದಿಕ್ ಮಂಜೇಶ್ವರ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News