ಮೋದಿ ವೈಯಕ್ತಿಕ ವರ್ಚಸ್ಸಿನ ವೃದ್ಧಿಗಾಗಿ 90 ಬಾರಿ ವಿದೇಶ ಪ್ರಯಾಣ: ಶತ್ರುಘ್ನ ಸಿನ್ಹಾ

Update: 2019-04-14 18:34 GMT

ಮಂಗಳೂರು, ಎ.14: ದೇಶದ ಪ್ರಧಾನಿ ತನ್ನ ವೈಯಕ್ತಿಕ ವರ್ಚಸ್ಸಿನ ವೃದ್ಧಿಗಾಗಿ ಐದು ವರ್ಷದಲ್ಲಿ 90 ಬಾರಿ ವಿದೇಶ ಪ್ರಯಾಣ ಮಾಡಿದ್ದಾರೆ ಎಂದು ಮಾಜಿ ಕೇಂದ್ರ ಸಚಿವ ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಮಿಥುನ್ ರೈ ಪರ ಚುನಾವಣಾ ಪ್ರಚಾರಕ್ಕೆ ಮುಡಿಪು ಪ್ರದೇಶಕ್ಕೆ ಇಂದು ಆಗಮಿಸಿದ ಸಂದರ್ಭದಲ್ಲಿ ಸುದ್ದಿಗಾರರನ್ನುದ್ದೇಶಿಸಿ ಮಾತನಾಡುತ್ತಿದ್ದರು.

ದೇಶದ ಪ್ರಧಾನಿ ತನ್ನ ವೈಯಕ್ತಿಕ ವರ್ಚಸ್ಸಿಗೆ ಸೇನೆಯ ಸಾಧನೆಯನ್ನು ಬಳಸಿಕೊಂಡಿದ್ದಾರೆ. ಈ ಬಾರಿಯ ಲೋಕಸಭಾ ಚುನಾವಣೆಯ ಪ್ರಚಾರಕ್ಕೆ 10 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದ್ದಾರೆ. ದೇಶದ ಚೌಕಿದಾರ್ ಎನ್ನುತ್ತಿರುವ ಮೋದಿಯ ಈ ರೀತಿಯ ವೆಚ್ಚವನ್ನು ದೇಶದ ಜನ ಪ್ರಶ್ನಿಸ ಬೇಕಾಗಿದೆ ಎಂದು ಶತ್ರುಘ್ನ ಸಿನ್ಹಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News