ಆಳ್ವಾಸ್ ಕನ್ನಡ ಶಾಲೆಗೆ 6,217 ಮಂದಿ ಪ್ರವೇಶಾಕಾಂಕ್ಷಿಗಳು

Update: 2019-04-14 18:02 GMT

ಮೂಡುಬಿದಿರೆ : ಕಳೆದ 10 ವರ್ಷಗಳಿಂದ 6ನೇ ತರಗತಿಯಿಂದ 10ನೇ ತರಗತಿಯವರೆಗೆ ಯಾವುದೇ ಶುಲ್ಕವಿಲ್ಲದೆ, ಊಟೋಪಚಾರ, ಹಾಸ್ಟೆಲ್ ಸಹಿತ ಸಂಪೂರ್ಣ ಉಚಿತ ಶಿಕ್ಷಣಾವಕಾಶ ಕಲ್ಪಿಸಿಕೊಡುತ್ತಿರುವ ಆಳ್ವಾಸ್ ಎಜ್ಯುಕೇಶನ್ ಫೌಂಡೇಶನ್‍ನ ಕನ್ನಡ ಮಾಧ್ಯಮ ಶಾಲೆಗೆ ಸೇರಲು 6,217 ವಿದ್ಯಾರ್ಥಿಗಳು ಬಯಸಿದ್ದಾರೆ.

ವಿದ್ಯಾಗಿರಿ ಸಮೀಪದ ಪುತ್ತಿಗೆ ವಿವೇಕಾನಂದ ನಗರದಲ್ಲಿರುವ ಆಳ್ವಾಸ್ ಕನ್ನಡ ಮಾಧ್ಯಮ ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲಾವರಣದಲ್ಲಿ ರವಿವಾರ 11ನೇ ವರ್ಷದ, ಮೊದಲ ಹಂತದ ಪ್ರವೇಶ ಪ್ರಕ್ರಿಯೆ ಜರಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 6ನೇ ತರಗತಿಗೆ 4,453 ಮಂದಿ, 7ನೇ ತರಗತಿಗೆ 692 ಮಂದಿ,  8ನೇ ತರಗತಿಗೆ 795 ಮಂದಿ, 9ನೇ ತರಗತಿಗೆ 251 ಹಾಗೂ 10ನೇ ತರಗತಿಗೆ 26 ಮಂದಿ ಪಾಲ್ಗೊಂಡಿದ್ದು  ಪೋಷಕರೂ ಸೇರಿದಂತೆ ಸುಮಾರು 20,000 ಮಂದಿ ಜಮಾಯಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News