ಕರುವೇಲು: ಅಂಬೇಡ್ಕರ್ ಜಯಂತಿ ಪ್ರಯುಕ್ತ ರಕ್ತದಾನ ಶಿಬಿರ

Update: 2019-04-15 09:15 GMT

ಉಪ್ಪಿನಂಗಡಿ, ಎ.15: ಸಂವಿಧಾನಶಿಲ್ಪಿ ಡಾ| ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಪ್ರಯುಕ್ತ ಕರುವೇಲುವಿನ ಟೀಮ್ ಚಕ್ರವರ್ತಿ ಹಾಗೂ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಜಂಟಿ ಆಶ್ರಯದಲ್ಲಿ ನಾಟೆಕಲ್ ನ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಭಾಗಿತ್ವದಲ್ಲಿ ರವಿವಾರ ಕರುವೇಲಿನ ದ.ಕ. ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಟೀಮ್ ಚಕ್ರವರ್ತಿ ಸ್ಥಾಪಕ ಅಶ್ರಫ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಉಪ್ಪಿನಂಗಡಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕಿ ವಂದನಾ ಕರುವೇಲು ಉದ್ಘಾಟಿಸಿ ಮೊದಲನೇ ರಕ್ತದಾನಿಯಾಗಿ ಸ್ವಯಂ ರಕ್ತದಾನ ಮಾಡಿದರು.

ಮುಖ್ಯ ಅತಿಥಿಯಾಗಿ ಕರುವೇಲು ಬದ್ರಿಯಾ ಜುಮಾ ಮಸೀದಿಯ ಖತೀಬ್ ಶುಕೂರು ದಾರಿಮಿ ಮಾತನಾಡಿದರು.

ಮುಖ್ಯ ಅತಿಥಿಗಳಾಗಿ ಕರುವೇಲುವಿನ ತಾಜುಲ್ ಉಲಮಾ ಮದ್ರಸದ ಎಂ.ಎಚ್.ಮುಹಮ್ಮದ್ ಸಖಾಫಿ, ಸಾಮ್ರಾಟ್ ಶಾಮಿಯಾನ ಮಾಲಕ ಇಸ್ಮಾಯಿಲ್ ಮಾಸ್ಟರ್ ಕರುವೇಲು, ಶಿಕ್ಷಕಿ ರೋಹಿಣಿ, ಉದ್ಯಮಿ ಇಕ್ಬಾಲ್ ಕರುವೇಲು, ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ರಝಾಕ್, ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ನಿರ್ವಾಹಕರಾದ ಅಜಯ್ ಬೆಳ್ತಂಗಡಿ, ಸಲೀಂ ಮುರ, ಉದ್ಯಮಿಗಳಾದ ಅಶ್ರಫ್ ಬನ್ನೂರು, ಫಾರೂಕ್, ಶಮೀರ್ ಕರುವೇಲು, ಕರುವೇಲು ಶಾಲೆಯ ಎಸ್.ಡಿ.ಎಂ.ಸಿ. ಅಧ್ಯಕ್ಷ ಲತೀಫ್, ಇಮ್ರಾನ್ ಹಾಗೂ ಟೀಮ್ ಚಕ್ರವರ್ತಿ ಕರುವೇಲು ಮತ್ತು ಬ್ಲಡ್ ಹೆಲ್ಪ್ ಲೈನ್ ಕರ್ನಾಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಶಿಬಿರದಲ್ಲಿ ಒಟ್ಟು 34 ಮಂದಿ ಪಾಲ್ಗೊಂಡು ರಕ್ತದಾನ ಮಾಡಿದರು.

ದಾನಿಗಳಿಂದ ರಕ್ತ ಸಂಗ್ರಹಿಸುವಲ್ಲಿ ಕಣಚೂರು ಮೆಡಿಕಲ್ ಕಾಲೇಜು ಆಸ್ಪತ್ರೆ ನಾಟೆಕಲ್,ಮಂಗಳೂರು ರಕ್ತನಿಧಿಯ  ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಸಹಕರಿಸಿದರು.

ರಮೀಝ್ ಎಂ.ಎಸ್. ಸ್ವಾಗತಿಸಿದರು.ಅಶ್ರಫ್ ಅರಬಿ ಕಲ್ಲಡ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News