ವಿಂಗ್ ಕಮಾಂಡರ್ ಅಭಿನಂದನ್ ರಿಂದ ಬಿಜೆಪಿಗೆ ಮತ ಎಂದು ಸುಳ್ಳು ಹರಡಿದ ಬಿಜೆಪಿ ಪರ ಪೇಜ್ ಗಳು

Update: 2019-04-15 17:20 GMT

ಹೊಸದಿಲ್ಲಿ, ಎ.15: ಲೋಕಸಭಾ ಚುನಾವಣೆಯಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ಅವರು ಬಿಜೆಪಿಗೆ ಮತ ಹಾಕಿದ್ದಾರೆ ಎನ್ನುವ ಪೋಸ್ಟ್ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಕೇಸರಿ ಬಣ್ಣದ ಬಿಜೆಪಿ ಶಾಲು ಹಾಕಿರುವ ವ್ಯಕ್ತಿಯೊಬ್ಬರ ಫೋಟೊ ಇದಾಗಿದೆ. ಈ ವ್ಯಕ್ತಿ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಹೋಲುತ್ತಿದ್ದು, ಕೆಲ ಕಿಡಿಗೇಡಿಗಳು ಯೋಧನ ಹೆಸರನ್ನು ತಮ್ಮ ರಾಜಕೀಯಕ್ಕಾಗಿ ಬಳಸಿಕೊಂಡಿದ್ದಾರೆ.

“ವಿಂಗ್ ಕಮಾಂಡರ್ ಅಭಿನಂದನ್ ಜಿ ಬಹಿರಂಗವಾಗಿ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ ಮತ್ತು ಮೋದಿ ಜಿಯನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಲು ಮತ ಹಾಕಿದ್ದಾರೆ. ಸದ್ಯಕ್ಕೆ ಮೋದಿಗಿಂತ ಉತ್ತಮ ಪ್ರಧಾನಿಯಿಲ್ಲ ಎಂದು ಸ್ವತಃ ಅವರೇ ಹೇಳಿದ್ದಾರೆ. ಗೆಳೆಯರೆ ಇದು ಜಿಹಾದಿಗಳು ಮತ್ತು ಕಾಂಗ್ರೆಸಿಗರಿಗೆ ತಲುಪುವಂತೆ ನೋಡಿಕೊಳ್ಳಿ” ಎಂದು ಇದೇ ಫೋಟೊ ಪೋಸ್ಟ್ ಮಾಡಿ ಬರೆಯಲಾಗಿದೆ.

ಬಿಜೆಪಿ ಬೆಂಬಲಿತ ಹಲವು ಪೇಜ್ ಗಳು ಮತ್ತು ಫೇಸ್ ಬುಕ್ ಗ್ರೂಪ್ ಗಳಲ್ಲಿ ಈ ಪೋಸ್ಟ್ ವೈರಲ್ ಆಗುತ್ತಿದೆ. ಆದರೆ ಇದು ಅಭಿನಂದನ್ ರನ್ನು ಹೋಲುವ ವ್ಯಕ್ತಿಯ ಫೋಟೊ ಹೊರತು ಅಭಿನಂದನ್ ರದ್ದಲ್ಲ ಎಂದು ತಿಳಿಯದೆ ಸಾವಿರಾರು ಮಂದಿ ಇಂತಹ ಪೋಸ್ಟ್ ಗಳನ್ನು ಶೇರ್ ಮಾಡುತ್ತಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News