ದ್ವಿತೀಯ ಪಿಯು ಫಲಿತಾಂಶ: ಆಳ್ವಾಸ್ ಪಿಯು ಕಾಲೇಜಿಗೆ ಶೇ.98.21 ಫಲಿತಾಂಶ

Update: 2019-04-15 18:30 GMT

ಮೂಡುಬಿದಿರೆ: ಈ ಬಾರಿಯ ದ್ವಿತೀಯ ಪಿಯುಸಿ ಪರೀಕ್ಷೆಗೆ ಆಳ್ವಾಸ್ ಪದವಿಪೂರ್ವ ಕಾಲೇಜು ಶೇ.98.21 ಫಲಿತಾಂಶ ಪಡೆದು ಅಮೋಘ ಸಾಧನೆಯನ್ನು ಮಾಡಿದೆ.

ಪರೀಕ್ಷೆಗೆ ಒಟ್ಟು 5051 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದು, 4,961 ಮಂದಿ ಉತ್ತೀರ್ಣರಾಗಿದ್ದಾರೆ. 

ವಾಣಿಜ್ಯ ವಿಭಾಗದಲ್ಲಿ ಒಲ್ವಿಟಾ ಅನ್ಸಿಲಾ ಡಿ’ಸೋಜ 596 ಅಂಕ (ಶೇ.99.33) ಅಂಕ ಗಳಿಸಿ ರಾಜ್ಯಮಟ್ಟದಲ್ಲಿ ಪ್ರಥಮ ರ್ಯಾಂಕ್ ಗಳಿಸಿದ್ದಾರೆ. ಅದೇ ವಿಭಾಗದ ಆಕಾಶ್ ಎಂ. ನಾಯರಿ 593 ಅಂಕ( ಶೇ.98.83), ವಿಷ್ಮಾ ಹೆಗ್ಡೆ 592 ಅಂಕ( ಶೇ.98.67), ಸುದೀಪ್ತಿ ಪಿ. 591( ಶೇ.98.50), ಪಲ್ಲವಿ ಎಚ್.ಆರ್ 586( ಶೇ.98.17), ಅನುಷಾ ಪಿ.ಎಲ್ 588( ಶೇ.98), ಗುರುಪ್ರಸಾದ್ ಹೆಗ್ಡೆ 589( ಶೇ.98.17), ಸುಬ್ರಹ್ಮಣ್ಯ ಬಿ.ಎಂ 588( ಶೇ.98) ಅಂಕ ಪಡೆದಿದ್ದಾರೆ.

ವಿಜ್ಞಾನ ವಿಭಾಗದಲ್ಲಿ ದೀಪಿಕಾ ಎಚ್.ಎಸ್, ದರ್ಶನ್ ಎಸ್, ಸಮರ್ಥ್, ಶ್ರುತಿ ಪಿ.ಎಸ್ ಮೂವರು ವಿದ್ಯಾರ್ಥಿಗಳ 590 ( ಶೇ.98.33), ನಂದಿನಿ ಎಸ್.ಎಚ್ 589 ( ಶೇ.98.16)  ಹಾಗೂ ಸಿಂಚನಾ ಉಡುಪ, ಸ್ನೇಹಾ ಕೆ. ಶೆಟ್ಟಿ, ಸೋನಿಯಾ ಪಿ., ಅರುಣ್ ಕೆ.ಎಂ, ನಿವೇದಿತಾ ರಘುನಾಥ್ ವಿದ್ಯಾರ್ಥಿಗಳು 588( ಶೇ.98) ಅಂಕ ಗಳಿಸುವ ಮೂಲಕ ಅಪೂರ್ವ ಸಾಧನೆ ಗೈದಿದ್ದಾರೆ. 

ವಿಜ್ಞಾನ ವಿಭಾಗದಲ್ಲಿ 4127 ಮಂದಿ ಹಾಜರಾಗಿ 4050ಮಂದಿ ಉತ್ತೀರ್ಣರಾಗಿ ಶೇ.98.16 ಫಲಿತಾಂಶ ದಾಖಲಾಗಿದೆ.  ವಾಣಿಜ್ಯ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ 886 ವಿದ್ಯಾರ್ಥಿಗಳ ಪೈಕಿ 873 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 98.53, ಕಲಾ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ 38 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100 ಫಲಿತಾಂಶ ಲಭಿಸಿದೆ. 

ಶೇಕಡವಾರು ಫಲಿತಾಂಶ:

ಶೇ.98ಕ್ಕಿಂತ ಹೆಚ್ಚು 18 , ಶೇ.97ಕ್ಕಿಂತ ಹೆಚ್ಚು 50, ಶೇ.96ಕ್ಕಿಂತ ಹೆಚ್ಚು 150 ಮಂದಿ, ಶೇ.95ಕ್ಕಿಂತ ಅಧಿಕ 346 ಮಂದಿ ಶೇ.90ಕ್ಕಿಂತ ಅಧಿಕ 1304 ಹಾಗೂ ಶೇ.85ಕ್ಕಿಂತ ಅಧಿಕ 2,184 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. 

ವಿಷಯವಾರು ವಿಭಾಗಗಳಲ್ಲಿ ಕನ್ನಡದಲ್ಲಿ 10, ಹಿಂದಿ 2, ಸಂಸ್ಕøತ 21, ಬೌತಶಾಸ್ತ್ರ 18, ರಸಾಯನ ಶಾಸ್ತ್ರ 73, ಗಣಿತ 232, ಜೀವಶಾಸ್ತ್ರ 13, ಕಂಪ್ಯೂಟರ್ ಸೈನ್ಸ್ 72, ಸಂಖ್ಯಾ ಶಾಸ್ತ್ರ 4, ಎಲೆಕ್ಟ್ರಾನಿಕ್ಸ್ 1, ಇಕನಾಮಿಕ್ಸ್ 5,  ಬ್ಯುಸಿನೆಸ್ ಸ್ಟಡೀಸ್ 20, ಅಕೌಂಟೆನ್ಸಿ 74, ಬೇಸಿಕ್ ಮಾಥ್ಸ್ 36 ಮಂದಿ 100ಕ್ಕೆ 100 ಅಂಕ ಗಳಿಸಿದ್ದಾರೆ. 

ಸಂಪೂರ್ಣ ಅಂಧ ವಿದ್ಯಾರ್ಥಿ ಕಲಾ ವಿಭಾಗದ ನಾಗರಾಜ ಸುತಾರ್ 548( ಶೇ.91.33)ಅಂಕ ಗಳಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ. ಇಂಗ್ಲೀಷ್ 94, ಹಿಂದಿ 95, ಇತಿಹಾಸ 93, ಅರ್ಥಶಾಸ್ತ್ರ 82, ಸಮಾಜಶಾಸ್ತ್ರ 91, ರಾಜ್ಯ ಶಾಸ್ತ್ರ 93 ಅಂಕ ಗಳಿಸಿದ್ದಾನೆ.

ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ ಮೋಹನ ಆಳ್ವ ವಿದ್ಯಾರ್ಥಿಗಳ ಸಾಧನೆಯನ್ನು ವಿವರಿಸಿ ಸಾಧಕ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಪ್ರೊ.ರಮೇಶ್ ಶೆಟ್ಟಿ, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್, ವಿಜ್ಞಾನದ ವಿಭಾಗದ ಡೀನ್‍ಗಳಾದ ಸದಾಕತ್ತ್, ಅಶ್ವಥ್, ವೆಂಕಟೇಶ್ ನಾಯಕ್, ಗಣನಾಥ್, ಕಲಾ ವಿಭಾಗದ ಡೀನ್ ವೇಣುಗೋಪಾಲ ಶೆಟ್ಟಿ, ಪಿಆರ್ ಒ ಡಾ. ಪದ್ಮನಾಭ ಶೆಣೈ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News