ಕರಾವಳಿಯಲ್ಲಿ ಬಿಜೆಪಿ ಗೆಲುವಿಗೆ ಕೇಂದ್ರ ಸರಕಾರದ ಅಭಿವೃದ್ಧಿ ಯೋಜನೆಗಳು ಸಹಕಾರಿ: ನಳಿನ್ ಕುಮಾರ್

Update: 2019-04-16 14:48 GMT

ಮಂಗಳೂರು, ಎ.16: ನರೇಂದ್ರ ಮೋದಿ ಆಡಳಿತಕ್ಕೆ ಕರಾವಳಿಯ ಜನತೆಯ ಬೆಂಬಲ ದೊರೆತಿದೆ. ಈ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಗೆಲುವಿಗೆ ಕೇಂದ್ರ ಸರಕಾರದಿಂದ ಆಗಿರುವ ಅಭಿವೃದ್ಧಿ ಯೋಜನೆಗಳು ಸಹಕಾರಿಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದ್ದಾರೆ.

ನಗರದಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚುನಾವಣಾ ಪ್ರಚಾರ  ಮೂರು ತಿಂಗಳ ಹಿಂದೆಯೇ ಪೂರ್ವ ತಯಾರಿಯೊಂದಿಗೆ ಆರಂಭಗೊಂಡಿದೆ. ಅಭ್ಯರ್ಥಿ ಘೋಷಣೆ ಬಳಿಕ ನಾಲ್ಕು ಬಾರಿ ಕ್ಷೇತ್ರ‌ ಪ್ರವಾಸ. ಕಾರ್ಯಕರ್ತರು ಮೂರು ಬಾರಿ ಮನೆಮನೆ ಭೇಟಿ ನೀಡಿದ್ದಾರೆ. ಕಳೆದ ಬಾರಿ ಆರಂಭಿಸಿದ ಪೇಜ್ ಪ್ರಮುಖ್ ಈ ಬಾರಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ಮೊದಲ ಚುನಾವಣೆಯಲ್ಲಿ ಮತದಾರರಿಗೆ ಪರಿಚಯ ಇರಲಿಲ್ಲ.  ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಬಿಜೆಪಿ, ನಾಲ್ಕು ಕಾಂಗ್ರೆಸ್ ಶಾಸಕರು ಇದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಎರಡನೇ ಬಾರಿ ಮೋದಿ ಅಲೆ ಇತ್ತು. ಬಿಜೆಪಿಯ  ೋರ್ವ ಶಾಸಕರು ಮಾತ್ರ ಇದ್ದರು. ಈ ಬಾರಿ ಏಳು ಶಾಸಕರು, ಕಾರ್ಯಕರ್ತರು ಮಾತ್ರವಲ್ಲದೆ ಮತದಾರರು ಕೆಲಸ ಮಾಡುತ್ತಿದ್ದಾರೆ‌‌ ಎಂದು ವಿವರಿಸಿದರು.

ಕಳೆದ ವಾರ ಮೋದಿಯವರಿಗೆ ಮಂಗಳೂರು ಜನತೆ ನೀಡಿದ ಸ್ವಾಗತ ಅದ್ಭುತ. ಮಂಗಳೂರಲ್ಲಿ ಮೋದಿ ಅಲೆಯಲ್ಲ, ಸುನಾಮಿ ಇದೆ.  ಮೋದಿ ಆಡಳಿತ ಕರಾವಳಿ ಜಿಲ್ಲೆಯ ಜನ ಮೆಚ್ಚಿದ್ದಾರೆ. ಜನರ ವಿಶ್ವಾಸ ನಮಗೆ ಬೆಂಗಾವಲಾಗಿದೆ.   ಮೋದಿಯ ಆಡಳಿತದ ಬಗ್ಗೆ ಮೆಚ್ಚುಗೆ ಹೊಂದಿರುವ ವಿದೇಶದಲ್ಲಿ ನೆಲೆಸಿರುವ 650 ಮತದಾರ ಮತದಾನಕ್ಕಾಗಿ ಊರಿಗೆ ಆಗಮಿಸಿದ್ದಾರೆ. ಈ ಬಾರಿ ಹಿಂದೆಂದಿಗಿಂತಲೂ ಹೆಚ್ಚು ಮತದಾನವಾಗಲಿದೆ. ವಿರೋಧಿಗಳು ಶಸ್ತ್ರ ಸನ್ಯಾಸ ಮಾಡಿದ್ದಾರೆ ನಮಗೆ ಮತ್ತೊಮ್ಮೆ ಗೆಲ್ಲುವ ವಿಶ್ವಾಸವಿದೆ ಎಂದು ನಳಿನ್ ಕುಮಾರ್ ಕಟೀಲ್  ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಗೋಪಾಲಕೃಷ್ಣ ಹೇರಳೆ, ನಾರಾಯಣ ಬೆಟ್ಟಂಪಾಡಿ, ಕಿಶೋರ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News