ಬೇಲ್ಪಾಡಿಯಲ್ಲಿ ನಾಳೆ ಸಾಮೂಹಿಕ ವಿವಾಹ ಕಾರ್ಯಕ್ರಮ

Update: 2019-04-16 08:20 GMT

ಉಪ್ಪಿನಂಗಡಿ, ಎ.16: ರೌಲತುಲ್ ಮಸಾಕೀನ್ ಸಮಿತಿ ರಿಯಾದ್ ಇದರ ವತಿಯಿಂದ ಎ.16ರಂದು ಬೇಲ್ಪಾಡಿ ತ್ವಾಹಾ ಜುಮಾ ಮಸೀದಿಯಲ್ಲಿ ಮೂರು ಜೋಡಿ ಬಡ ಹೆಣ್ಮಕ್ಕಳ ಸಾಮೂಹಿಕ ವಿವಾಹ ಕಾರ್ಯಕ್ರಮವು ನಡೆಯಲಿದೆ.

ಬೆಳಗ್ಗೆ ಎಂಟು ಗಂಟೆಗೆ  ಬೇಲ್ಪಾಡಿ ದರ್ಗಾ ಝಿಯಾರತ್ ನೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದೆ. ಹತ್ತು ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರೌಲತುಲ್ ಮಸಾಕೀನ್ ಸಮಿತಿ ಅಧ್ಯಕ್ಷ ನಾಸಿರ್ ರೆಂಜಲಾಡಿ ವಹಿಸುವರು. ಅಸ್ಸೈಯದ್ ಅನಸ್ ಅಲ್ ಹಾದಿ ತಂಙಳ್ ಗಂಡಿಬಾಗಿಲು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.

ಡಾ.ಕೆ.ಎಂ.ಶಾಹ್ ಮುಸ್ಲಿಯಾರ್ ಅತೂರು ಗೈಯುವರು. ನಿಖಾ ನೇತೃತ್ವವನ್ನು ಅಸ್ಸೈಯದ್ ಜುನೈದ್ ಜಿಫ್ರೀ ತಂಙಳ್ ಆತೂರು ನಡೆಸಿಕೊಡಲಿದ್ದಾರೆ. ಜಮಾಲುದ್ದೀನ್ ದಾರಿಮಿ, ಸ್ಥಳೀಯ ಖತೀಬರಾದ  ಅಬ್ದುರ್ರಶೀದ್ ರಹ್ಮಾನಿ ಕುಂತೂರು,  ಹುಸೈನ್ ದಾರಿಮಿ ರೆಂಜಲಾಡಿ, ನೆಕ್ಕರೆ ಖತೀಬ್ ಖಾಲಿದ್ ಫೈಝಿ, ತುರ್ಕಳಿಕೆ ಖತೀಬ್ ಅಬ್ದುಲ್ಲಾ ಸಖಾಫಿ ಕೊಟ್ಟಮುಡಿ, ರೆಂಜಲಾಡಿ ಖತೀಬ್ ರಫೀಕ್ ಫೈಝಿ, ಮುನೀರ್ ಅನ್ವರಿ ಕುಂಡಾಜೆ ಕುಂತೂರು ಜಮಾಅತ್ ಅಧ್ಯಕ್ಷ ಅನೀಸ್ ನೂಜಿಲ, ಮಾಜಿ ಅಧ್ಯಕ್ಷ ಹಸೈನಾರ್ ಹಾಜಿ ಚಾಲ್ಕರೆ, ಮಸ್ಜಿದು ರ್ರಹ್ಮಾನ್ ಕುಂಡಾಜೆ, ಎಸ್ಕೆಎಸ್ಸೆಸ್ಸೆಫ್ ಕುಂಡಾಜೆ ಅದ್ಯಕ್ಷ ಸಿದ್ದೀಕ್ ಬೇಲ್ಪಾಡಿ, ಕುಂಡಾಜೆ, ಬೇಲ್ಪಾಡಿ ಮಜ್ಲಿಸುನ್ನೂರ್ ಜಿ.ಸಿ.ಸಿ ಸಮಿತಿ ಅಧ್ಯಕ್ಷ ಉಮರ್ ಹಾಜಿ ಕುಂತೂರು, ಅಬ್ದುಲ್ಲ ಕುಂಞಿ ನೆಕ್ಕರೆ, ಮುಹಮ್ಮದ್ ಅಲಿ ತುರ್ಕಳಿಕೆ, ಹಸೈನಾರ್ ಹಾಜಿ ಕೊಯ್ಲ, ಆತೂರು  ಮಸೀದಿಯ ಅಧ್ಯಕ್ಷ ಬಿ.ಕೆ.ರಝಾಕ್, ವಿವಾ ಮಾಲಕರಾದ ಇಂತಿಯಾಝ್ ಬೇಲ್ಪಾಡಿ, ಸಮಿತಿಯ ಮಾಜಿ ಅಧ್ಯಕ್ಷ ಇಸಾಕ್ ಮಶ್ರಿಕ್ , ಸದಸ್ಯ ತೌಸೀಫ್ ಆತೂರು ಸಮಿತಿಯ ಪ್ರ.ಕಾರ್ಯದರ್ಶಿ ಇಕ್ಬಾಲ್ ಚಾಲ್ಕರೆ ,ಮಾಸ್ಟರ್ ಹಾಫಿಲ್ ಸಫ್ವಾನ್ ಕೋಚಕಟ್ಟೆ ಅತಿಥಿಗಳಾಗಿ ಭಾಗವಹಿಸುವರು.

    ಮೂರು ಜೋಡಿ ವಧು ವರರಿಗೆ ವಿವಾಹದ ವಸ್ತ್ರ ,ಮೂರು ವಧುಗಳಿಗೆ ತಲಾ ಏಳು ಪವನ್ ಚಿನ್ನಾಭರಣ ನೀಡುವುದರೊಂದಿಗೆ ವಿವಾಹ ಕಾರ್ಯಕ್ರಮದ ಸಂಪೂರ್ಣ ವೆಚ್ಚವನ್ನು ಸಮಿತಿ ಭರಿಸಲಿದೆ ಎಂದು ರೌಲತುಲ್ ಮಸಾಕೀನ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಚಾಲ್ಕರೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News