ಲೋಕಸಭಾ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜು: ಡಿಸಿ ಹೆಪ್ಸಿಬಾ

Update: 2019-04-16 15:12 GMT

ಉಡುಪಿ, ಎ.16: ಎ.18ರಂದು ನಡೆಯುವ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತದಾನಕ್ಕೆ ಜಿಲ್ಲಾಡಳಿತ ಸಂಪೂರ್ಣ ಸಜ್ಜುಗೊಂಡಿದ್ದು, ಮತದಾನ ಶಾಂತಿಯುತ ಹಾಗೂ ಪಾರದರ್ಶಕವಾಗಿ ನಡೆಯಲು ಬೇಕಾದ ಎಲ್ಲಾ ಪೂರ್ವ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.

ಮಂಗಳವಾರ ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತಿದ್ದರು. ಮತದಾನ ಕರ್ತವ್ಯಕ್ಕಾಗಿ 206 ಮೈಕ್ರೋ ಅಬ್ಸರ್ವರ್, ತಲಾ 996 ಮತಗಟ್ಟೆ ಮುಖ್ಯ ಅಧಿಕಾರಿ ಹಾಗೂ ಸಹಾಯಕ ಮುಖ್ಯ ಅಧಿಕಾರಿ ಸೇರಿದಂತೆ ಒಟ್ಟು 6489 ಸಿಬ್ಬಂದಿಗಳನ್ನು ನೇಮಿಸಲಾಗಿದೆ. ಜಿಲ್ಲೆಯ ಶೇ.99.05 ಮತದಾರರಿಗೆ ಚುನಾವಣಾ ಆಯೋಗ ಒದಗಿಸಿದ ಅವರವರ ಭಾವಚಿತ್ರ ಹಾಗೂ ಮತಗಟ್ಟೆಯ ವಿವರವಿರುವ ವೋಟರ್ ಸ್ಲಿಪ್‌ಗಳನ್ನು ವಿತರಿಸಲಾಗಿದೆ ಎಂದರು.

ಅಲ್ಲದೇ ಪ್ರತಿ ಮತಗಟ್ಟೆಯಲ್ಲಿ ಮತದಾರರ ಸಹಾಯಕ್ಕಾಗಿ ಬೂತ್‌ಮಟ್ಟದಲ್ಲಿ ಸಹಾಯ ಕೇಂದ್ರ (ಹೆಲ್ಫ್‌ಡೆಸ್ಕ್)ಗಳಿದ್ದು, ಅಲ್ಲಿ ಅಧಿಕಾರಿಗಳು ವಾರ್ಗದರ್ಶನ ನೀಡಲಿದ್ದಾರೆ ಎಂದರು.

ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿರುವ ಸಿಬ್ಬಂದಿಗಳಿಗಾಗಿ ಜಿಪಿಎಸ್ ಅಳವಡಿಸಿರುವ 244 ವಾಹನಗಳನ್ನು ವ್ಯವಸ್ಥೆ ಮಾಡಲಾಗಿದೆ. ಇವುಗಳಲ್ಲಿ 155 ಬಸ್ಸುಗಳು, 21 ಮಿನಿಬಸ್ಸುಗಳು, 47 ಟೆಂಪೊ ಟ್ರಾವಲರ್, ಮ್ಯಾಕ್ಸಿಕ್ಯಾಬ್ ಗಳು, 13 ಜೀಪ್‌ಗಳು ಹಾಗು 8 ಲಾರಿ ಕಂಟೈನರ್‌ಗಳಿರುತ್ತವೆ. ಮತಗಟ್ಟೆಗೆ ತೆರಳುವ ಎಲ್ಲಾ ವಾಹನಗಳಿಗೆ ಹಾಗೂ ಮತಯಂತ್ರಗಳನ್ನು ವಿಧಾನಸಭಾ ಕ್ಷೇತ್ರದ ದ್ರತಾ ಕೊಠಡಿಯಿಂದ, ಮತ ಎಣಿಕಾ ಕೇಂದ್ರವಾದ ಸೈಂಟ್ ಸಿಸಿಲಿಸ್ ಶಿಕ್ಷಣ ಸಂಸ್ಥೆಯ ಮತ ಎಣಿಕಾ ಕೇಂದ್ರಕ್ಕೆ ತರುವ ಕಂಟೈನರ್ ಲಾರಿಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ಸೂಕ್ತ ದ್ರತಾ ಬೆಂಗಾವಲಿನಲ್ಲಿ ದ್ರತಾ ಕೊಠಡಿಗೆ ತರಲಾಗುವುದು ಎಂದು ಡಿಸಿ ಹೇಳಿದರು.

1837 ಮತಗಟ್ಟೆಗಳು: ಜಿಲ್ಲೆಯಲ್ಲಿ ಒಟ್ಟು 15,13,231 ಮತದಾರರಿದ್ದು, ಇವರಲ್ಲಿ 7,38,503 ಪುರುಷ ಹಾಗೂ 7,74,674 ಮಹಿಳಾ ಮತದಾರರು. ಅಲ್ಲದೇ 54 ಮಂದಿ ಇತರೆ ಮತದಾರರೂ ಇಲ್ಲಿದ್ದಾರೆ. ಈ ಕ್ಷೇತ್ರದಲ್ಲಿ ಒಟ್ಟು 1837 ಮತಗಟ್ಟೆಗಳಿದ್ದು, ಇವುಗಳಲ್ಲಿ ಕುಂದಾಪುರದಲ್ಲಿ 222, ಉಡುಪಿ 226, ಕಾಪು 208, ಕಾರ್ಕಳ 209, ಶೃಂಗೇರಿ 256, ಮೂಡಿಗೆರೆ 231, ಚಿಕ್ಕಮಗಳೂರು 257 ಹಾಗೂ ತರಿಕೆರೆಯಲ್ಲಿ 228 ಮತಗಟ್ಟೆಗಳಿರುತ್ತವೆ.

ಎಲ್ಲಾ ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯದ ರಾಜಕೀಯ ಪಕ್ಷಗಳಿಗೆ ಅಂತಿಮ ಮತದಾರರ ಪಟ್ಟಿಯ ಪ್ರತಿಯನ್ನು ಒದಗಿಸಲಾಗಿದೆ. ಜಿಲ್ಲೆಯಲ್ಲಿ 25 ಸಖೀ ಮತಗಟ್ಟೆಗಳು, ವಿಶೇಷ ಚೇತನ ಅಧಿಕಾರಿಗಳಿಂದ ನಡೆಸಲಾಗುವ ವಿಕಲಚೇತನರ 2 ಮತಗಟ್ಟೆಗಳು ಹಾಗೂ ಸಮಾಜದ ದುರ್ಬಲ ವರ್ಗದವರಿ ಗಾಗಿ ಒಂದು ಬುಡಕಟ್ಟು ಜನಾಂಗದ ಮತಗಟ್ಟೆಗಳನ್ನು ತೆರೆಯಲಾಗುತ್ತದೆ. ವಿಶೇಷ ಚೇತನ ಮತದಾರರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮ ತೆಗೆದುಕೊಳ್ಳಲಾಗಿದೆ ಎಂದರು.

1379 ಇವಿಎಂ:  ಮತದಾನಕ್ಕಾಗಿ ಜಿಲ್ಲೆಗೆ ಒದಗಿಸಲಾಗಿರುವ ಎಲ್ಲಾ ಎವಿಎಂ ಮತ್ತು ವಿವಿ ಪ್ಯಾಟ್‌ಗಳನ್ನು ಪರೀಕ್ಷಿಸಲಾಗಿದ್ದು, ರಾಜಕೀಯ ಪಕ್ಷಗಳು ಮತ್ತು ಅ್ಯರ್ಥಿಳಿಗೆ ಮಾಹಿತಿ ನೀಡಿ, ಅವರ ಪ್ರತಿನಿಧಿಗಳ ಸಮ್ಮುಖದಲ್ಲಿ ಮತಪತ್ರಗಳ ಜೋಡಣೆ ಕಾರ್ಯ ನಡೆಸಲಾಗಿದೆ. 1379 ಬ್ಯಾಲೆಟ್ ಯೂನಿಟ್, 1280 ಕಂಟ್ರೋಲ್ ಯೂನಿಟ್ ಮತ್ತು 1477 ವಿವಿ ಪ್ಯಾಟ್ ಗಳನ್ನು ಉಪಯೋಗಿಸಲಾಗುತ್ತಿದೆ. ಮತಯಂತ್ರಗಳ ನಿರ್ವಹಣೆಗೆ ಪ್ರತಿ ವಿಧಾನಸಬಾ ಕ್ಷೇತ್ರಕ್ಕೆ ತಲಾ ಇಬ್ಬರಂತೆ ಒಟ್ಟು ಎಂಟು ಮಂದಿ ಇಂಜಿನಿಯರ್ ಗಳನ್ನು ಬಿಇಎಲ್ ಉಡುಪಿ ಜಿಲ್ಲೆಯ ನಾಲ್ಕು ಕ್ಷೇತ್ರಗಳಿಗೆ ನಿಯೋಜಿಸಿದೆ ಎಂದು ಹೆಪ್ಸಿಬಾ ರಾಣಿ ವಿವರಿಸಿದರು.

ಉಡುಪಿ ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯ 54 ಮತಗಟ್ಟೆಗಳಿಗೆ ವೆಬ್ ಕ್ಯಾಮೆರಾ ವ್ಯವಸ್ಥೆ ಮಾಡಲಾಗಿದ್ದು, 15 ಮತಗಟ್ಟೆಗಳಿಗೆ ವೀಡಿಯೋ ಗ್ರಾಪರ್, 21 ಮತಗಟ್ಟೆಗಳಿಗೆ ಕೇಂದ್ರೀಯ ಭದ್ರತಾ ಪಡೆ ಸಿಬ್ಬಂದಿಗಳನ್ನು ಹಾಗೂ 178 ಮತಗಟ್ಟೆಗಳಿಗೆ ಮೈಕ್ರೋ ಅಬ್ಸರ್ವರ್‌ಗಳನ್ನು ನೇಮಿಸಲಾಗಿದೆ.
 ಚುನಾವಣಾ ಕರ್ತವ್ಯದಲ್ಲಿರುವ ಅಧಿಕಾರಿ/ಸಿಬ್ಬಂದಿ, ಪೊಲೀಸ್/ ವಾಹನ ಚಾಲಕರಿಗೆ ಒಟ್ಟು 584 ಅಂಚೆ ಮತಪತ್ರ ಮತ್ತು 3619 ಇಡಿಸಿ ವಿತರಿಸಲಾ ಗಿದ್ದು, 575 ಸೇವಾ ಮತದಾರರಿಗೆ ಇಟಿಪಿಬಿಎಸ್ ಮೂಲಕ ಅಂಚೆಮತಪತ್ರ ಕಳುಹಿಸಲಾಗಿದೆ.

ಚುನಾವಣಾ ವೆಚ್ಚವೀಕ್ಷಕರ ಮಾರ್ಗದರ್ಶನದಲ್ಲಿ, ಚುನಾವಣಾ ಅ್ಯರ್ಥಿಗಳ ಖರ್ಚು ವೆಚ್ಚಗಳ ಲೆಕ್ಕಪತ್ರವನ್ನು ಈಗಾಗಲೇ 3 ಬಾರಿ ಪರಿಶೀಲಿಸಲಾಗಿದೆ. ಮತದಾನಕ್ಕೆ 72 ಗಂಟೆ ಮುಂಚೆ, 48 ಗಂಟೆ ಮುಂಚೆ, 24 ಗಂಟೆ ಮುಂಚೆ ಮತ್ತು ಮತದಾನದ ದಿನದಂದು ಪ್ಲೈಯಿಂಗ್ ಸ್ಕ್ವಾಡ್ ಹಾಗೂ ತನಿಖಾ ತಂಡಕ್ಕೆ ದಿನದ 24 ಗಂಟೆ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಲು ನಿರ್ದೇಶಿಸಲಾಗಿದೆ. ಮಾದರಿ ನೀತಿ ಸಂಹಿತೆ ಉಲ್ಲಂಘನೆಗೆ ಅವಕಾಶ ನೀಡದಂತೆ ತಿಳಿಸಲಾಗಿದೆ.

ಮಾದರಿ ನೀತಿ ಸಂಹಿತೆ ಅನುಷ್ಠಾನಕ್ಕೆ ರಚಿಸಲಾಗಿರುವ ಪ್ಲೈಯಿಂಗ್ ಸ್ವ್ಕಾಡ್, ಸೆಕ್ಟರ್ ಅಧಿಕಾರಿ ಮತ್ತು ಇತರೆ ತಂಡಗಳಿಗೆ ಅತ್ಯಂತ ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ. ಈ ಅವಧಿಯಲ್ಲಿ ಚುನಾವಣಾ ಅಕ್ರಮಗಳು, ಮತದಾರರಿಗೆ ಆಮಿಷವೊಡ್ಡಿ ಸೆಳೆಯುವ ಯತ್ನಗಳು ನಡೆಯುವ ಸಾಧ್ಯತೆಯಿ ರುವುದರಿಂದ, ಯಾವುದೇ ಸಂಶಯಾತ್ಮಕ ಚಟುವಟಿಕೆ ಕಂಡುಬಂದಲ್ಲಿ ಪರಿಶೀಲಿಸಿ ಕೂಡಲೇ ಕ್ರಮ ಜರುಗಿಸಲು ಸೂಚಿಸಲಾಗಿದೆ. ಮತದಾನದ ದಿನವೂ ಯಾವುದೇ ಅಕ್ರಮ ಕಂಡುಬಂದಲ್ಲಿ ಸೀವಿಜಿಲ್ ಮೂಲಕ ಅಥವಾ ಸಹಾಯವಾಣಿ ಸಂಖ್ಯೆ 1950ಗೆ ದೂರು ನೀಡುವಂತೆ ಡಿಸಿ ತಿಳಿಸಿದರು.

ಮಸ್ಟರಿಂಗ್-ಡಿಮಸ್ಟರಿಂಗ್ ವ್ಯವಸ್ಥೆ: ಜಿಲ್ಲೆಯ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಎ.17ರ ಬುಧವಾರ ಬೆಳಗ್ಗೆ 8:00 ಗಂಟೆಯಿಂದ ಮತಗಟ್ಟೆಗೆ ಅಗತ್ಯವಿರುವ ಮತಯಂತ್ರ ಹಾಗೂ ಇತರ ಮತದಾನ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ.

ನಾಳೆ ಅಪರಾಹ 2 ಗಂಟೆಯೊಳಗೆ ಎಲ್ಲಾ ಮತಗಟ್ಟೆ ಅಧಿಕಾರಿಗಳನ್ನು ಅವರವರಿಗೆ ನಿಯೋಜಿಸಲಾದ ಮತಗಟ್ಟೆಗಳಿಗೆ ನಿಗದಿತ ವಾಹನಗಳ ಮೂಲಕ ಕಳುಹಿಸಲು ಬೇಕಾದ ವ್ಯವಸ್ಥೆ ಮಾಡಲಾಗಿದೆ. ಎಲ್ಲರೂ ಸಂಜೆ 8ಗಂಟೆಯೊಳಗೆ ಸುರಕ್ಷಿತವಾಗಿ ಮತಗಟ್ಟೆಗೆ ತಲುಪಿದ ಬಗ್ಗೆ ಸಂಬಂಧಿತ ಸೆಕ್ಟರ್ ಅಧಿಕಾರಿಗಳಿಗೆ ವರದಿ ಸಲ್ಲಿಸಬೇಕು. ಮತದಾನ ಮುಗಿದ ಬಳಿಕ ಅವರು ಅದೇ ವಾಹನದಲ್ಲಿ ಡಿಮಸ್ಟರಿಂಗ್ ಕೇಂದ್ರಕ್ಕೆ ಬಂದು ಮತಯಂತ್ರ ಹಾಗೂ ಇತರ ಸಾಮಗ್ರಿಗಳನ್ನು ಹಸ್ತಾಂತರಿಸಬೇಕು. ಅನಂತರ ಅವುಗಲನ್ನು ಮೊಹರು ಮಾಡಿದ ಕವರುಗಳಲ್ಲಿ ಹಾಕಿ ಜಿಲ್ಲಾಕೇಂದ್ರದ ಭದ್ರತಾ ಕೊಠಡಿಗೆ ಪೊಲೀಸ್ ಬಂದೋಬಸ್ತ್ ನಲ್ಲಿ ತರಲಾಗುವುದು ಎಂದರು.

ಜಿಲ್ಲೆಯಲ್ಲಿ 180 ಸೂಕ್ಷ್ಮ, 36 ನಕ್ಸಲ್ ಬೂತ್‌ಗಳು

ಎಸ್ಪಿ ನಿಶಾ ಜೇಮ್ಸ್ ಮಾತನಾಡಿ, ಜಿಲ್ಲೆಯ 865 ಮತಗಟ್ಟೆಗಳಲ್ಲಿ 180 ಸೂಕ್ಷ್ಮ ಎಂದು ಗುರುತಿಸಲಾಗಿದ್ದು ಉಳಿದ 685 ಸಾಮಾನ್ಯ ಮತಗಟ್ಟೆಗಳಾಗಿವೆ. ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ 36 ಮತಗಟ್ಟೆಗಳಿದ್ದು, ಈ ಪ್ರದೇಶದಲ್ಲಿ ಸೂಕ್ತ ದ್ರತಾ ವ್ಯಸ್ಥೆ ಕಲ್ಪಿಸಲಾಗುವುದು ಎಂದರು.

ಎಸ್ಪಿ ನಿಶಾ ಜೇಮ್ಸ್ ಮಾತನಾಡಿ, ಜಿಲ್ಲೆಯ 865 ಮತಗಟ್ಟೆಗಳಲ್ಲಿ 180 ಸೂಕ್ಷ್ಮ ಎಂದು ಗುರುತಿಸಲಾಗಿದ್ದು ಉಳಿದ 685 ಸಾಮಾನ್ಯ ಮತಗಟ್ಟೆಗಳಾಗಿವೆ. ನಕ್ಸಲ್‌ಪೀಡಿತ ಪ್ರದೇಶಗಳಲ್ಲಿ 36 ಮತಗಟ್ಟೆಗಳಿದ್ದು, ಈ ಪ್ರದೇಶದಲ್ಲಿ ಸೂಕ್ತ ದ್ರತಾ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು. ಚುನಾವಣಾ ಕರ್ತವ್ಯಕ್ಕೆ ಜಿಲ್ಲೆಯ ಸಮಸ್ತ ಪೊಲೀಸ್ ಸಿಬ್ಬಂದಿಗಳೊಂದಿಗೆ, ಕಾರಾಗೃಹ ಇಲಾಖೆ, ಹೋಂಗಾರ್ಡ್, ಅರಣ್ಯ ಇಲಾಖೆಯ ಸಿಬ್ಬಂದಿಗಳು, 4 ಕೆಎಸ್‌ಆರ್‌ಪಿ ತುಕಡಿ ಹಾಗೂ 2 ಐಟಿಡಿಪಿ ತುಕಡಿಗಳನ್ನು ನಿಯೋಜಿಸ ಲಾಗಿದೆ. ನಕ್ಸಲ್ ಪೀಡಿತ ಪ್ರದೇಶಗಳಲ್ಲಿ 8 ಬಾರಿ ಜಂಟಿ ಕೊಂಬಿಂಗ್ ನಡೆಸಲಾಗಿದೆ. ಜಿಲ್ಲೆಯಾದ್ಯಂತ ಪಥ ಸಂಚಲನ ನಡೆಸುವ ಮೂಲಕ ಸಾರ್ವಜನಿಕರಲ್ಲಿ ಭದ್ರತೆ ಭಾವನೆಯನ್ನು ಮೂಡಿಸಲಾಗಿದೆ.

ಚುನಾವಣೆಗೆ ಅಡ್ಡಿಪಡಿಸುವ 148 ಮಂದಿಯನ್ನು ಗುರುತಿಸಲಾಗಿದ್ದು, ಇವರಲ್ಲಿ 127 ಜನರಿಂದ ಮುಚ್ಚಳಿಕೆ ಪಡೆದುಕೊಳ್ಳಲಾಗಿದೆ. ಜಿಲ್ಲೆಯಲ್ಲಿ 1738 ರೌಡಿಶೀಟರ್‌ಗಳನ್ನು ಗುರುತಿಸಲಾಗಿದ್ದು, ಇವರಲ್ಲಿ 1419 ಮಂದಿ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತಿದೆ. 1324 ರೌಡಿ ಶೀಟರ್‌ಗಳಿಂದ ಮುಚ್ಚಳಿಕೆ ಪಡೆದು ಕೊಳ್ಳಲಾಗಿದೆ. ಜಿಲ್ಲೆಯಲ್ಲಿ 3696 ಮಂದಿಯಿಂದ ಶಸ್ತ್ರಾಸ್ತ್ರ ಠೇವಣಿ ಮಾಡಿ ಕೊಳ್ಳಲಾಗಿದೆ ಎಂದು ನಿಶಾ ಜೇಮ್ಸ್ ತಿಳಿಸಿದರು. ಅಪರ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News