ಸಂವಿಧಾನ ಬದಲಾಣೆಗೆ ಹುನ್ನಾರ: ಶ್ಯಾಮ್‌ರಾಜ್ ಬಿರ್ತಿ

Update: 2019-04-16 15:13 GMT

ಬ್ರಹ್ಮಾವರ, ಎ.16: ದೇಶದ ಸಂವಿಧಾನ ಇಂದು ಅಪಾಯದಲ್ಲಿದೆ. ಇದರ ಪರಿಣಾಮ ದಲಿತರು ಮತ್ತು ಅಲ್ಪಸಂಖ್ಯಾತರು ಅಭಧ್ರತೆಯಿಂದ ಬದುಕು ಸಾಗಿಸುತಿದ್ದಾರೆ. ಇದೀಗ ಸಂವಿಧಾನ ಬದಲಾವಣೆಯ ಮಾತುಗಳು ಕೇಳಿ ಬರುತ್ತಿವೆ. ನಾವು ಸಂಘಟಿತರಾಗದೇ ಇದ್ದಲ್ಲಿ ಮತ್ತೆ ಮೊದಲಿನಂತೆ ಆಗುವುದಲ್ಲಿ ಯಾವುದೇ ಸಂಶಯವಿಲ್ಲ ಎಂದು ದಲಿತ ದಮನಿತರ ಹೋರಾಟ ಸಮಿತಿಯ ಜಿಲ್ಲಾಧ್ಯಕ್ಷ ಶ್ಯಾಮ್ಾಜ್ ಬಿರ್ತಿ ಆತಂಕ ವ್ಯಕ್ತಪಡಿಸಿದ್ದಾರೆ.

ಬ್ರಹ್ಮಾವರ ಭೀಮ್ ಆರ್ಮಿ ಮತ್ತು ತೆಂಕುಬಿರ್ತಿ ಅಂಬೇಡ್ಕರ್ ಯುವಕ ಮಂಡಲದ ಜಂಟಿ ಸಹಭಾಗಿತ್ವದಲ್ಲಿ ರವಿವಾರ ತೆಂಕುಬಿರ್ತಿಯ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾದ ಮಹಾನ್ ಮಾನವತವಾದಿ ಭಾರತರತ್ನ ಡಾ. ಬಾಬಾಸಾಹೇಬ ಬಿ.ಆರ್.ಅಂಬೇಡ್ಕರ್ ಅವರ 128ನೇ ಜನ್ಮದಿನಾಚರೆಯಲ್ಲಿ ಅವರು ಮಾತನಾಡುತಿದ್ದರು.

ಮುಖ್ಯ ಭಾಷಣಕಾರರಾಗಿ ಮಾತನಾಡಿದ ಚಿಂತಕ ಪ್ರೊ.ಕೆ.ಫಣಿರಾಜ್, ಪ್ರಸ್ತುತ ರಾಜಕೀಯ ಮತ್ತು ಆರ್ಥಿಕ ಸ್ಥಿತಿಗತಿಯಲ್ಲಿ ಅಂಬೇಡ್ಕರ್ ಅವರ ಚಿಂತನೆಯ ಅಗತ್ಯತೆಯನ್ನು ಯುವಜನರು ತಿಳಿದುಕೊಳ್ಳಬೇಕು. ದೇಶದಲ್ಲಿ ಸರ್ವರಿಗೂ ಸ್ವಾತಂತ್ರ್ಯ ಸಿಗಬೇಕೆಂದು ಹೋರಾಡಿರುವುದು ಅಂಬೇಡ್ಕರ್ ಮಾತ್ರ ಎಂದು ತಿಳಿಸಿದರು.

ದಲಿತ ನಾಯಕ ವಿಠ್ಠಲ್ ತೋಟ್ಟಂ ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾ ರ್ಪಣೆ ಮಾಡುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಗಣೇಶ್ ಸಾಲಿಯಾನ್ ಹೊಸಾಳ, ಹರೀಶ್ಚಂದ್ರ ಕೆ.ಡಿ., ಶ್ಯಾಮ್ಸುಂದರ್ ತೆಕಟ್ಟೆ ಮುಖ್ಯ ಅತಿಥಿಗಳಾಗಿದ್ದರು.

ಅಧ್ಯಕ್ಷತೆಯನ್ನು ಭೀಮ್ ಆರ್ಮಿ ಅಧ್ಯಕ್ಷ ಪ್ರಕಾಶ್ ಹೇರೂರು ವಹಿಸಿದ್ದರು. ಭೀಮ್ ಆರ್ಮಿ ಜೊತೆ ಕಾರ್ಯದರ್ಶಿ ಸದಾನಂದ ಮಾಸ್ತರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಗಣೇಶ್ ಬಿರ್ತಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News