ಎ. 26: ಪೊಲ್ಯ ಹಿಮಾಯತುಲ್ ಇಸ್ಲಾಮ್ ಮಸೀದಿ ಉದ್ಘಾಟನೆ

Update: 2019-04-16 15:15 GMT

ಕಾಪು, ಎ.16: ಉಚ್ಚಿಲ ಪೊಲ್ಯದಲ್ಲಿ ನೂತನವಾಗಿ ನಿರ್ಮಿಸಲಾದ ಹಿಮಾ ಯತುಲ್ ಇಸ್ಲಾಮ್ ಅರಬೀ ಜುಮಾ ಮಸೀದಿ ಮತ್ತು ಮದ್ರಸ ಕಟ್ಟಡದ ಉದ್ಘಾಟನೆ ಎ.26, 27, 28ರಂದು ನಡೆಯಲಿದೆ.

ಎ.26ರಂದು ಅಪರಾಹ್ನ 12ಗಂಟೆಗೆ ಮಸೀದಿಯನ್ನು ಜಿಲ್ಲಾ ಖಾಝಿ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉದ್ಘಾಟಿಸಲಿರುವರು. ಸೈಯ್ಯದ್ ಇಬ್ರಾಹಿಂ ತಂಙಳ್ ಉಚ್ಚಿಲ ಮತ್ತು ಶೈಕುನ ಪಿ.ಮುಹಮ್ಮದ್ ಹಾಜಿ ಮುಸ್ಲಿ ಯಾರ್ ಪುಂಜಾಲಕಟ್ಟೆ ದುವಾ ನೆರವೇರಿಸಿದರು.

ಮಗ್ರೀಬ್ ನಮಾಝ್ ಬಳಿಕ ಮಜ್ಲೀಸ್ ಕಾರ್ಯಕ್ರಮ ನಡೆಯಲಿದ್ದು, ಅಸೈಯ್ಯದ್ ಶಬುದ್ದೀನ್ ಅಲ್ ಹೈದ್ರೋಸಿ ತಂಙಳ್ ಕಿಲ್ಲೂರು ದುವಾ ನೆರ ವೇರಿಸಲಿರುವರು. ಎ.27ರಂದು ಮಗ್ರೀಬ್ ನಮಾಜಿನ ಬಳಿಕ ನೂತನ ಮದ್ರಸ ಕಟ್ಟಡದ ದ.ಕ. ಜಿಲ್ಲಾ ಖಾಝಿ ಶೈಖುನ ತ್ವಾಕಾ ಅಹಮದ್ ಮುಸ್ಲಿಯಾರ್ ಉದ್ಘಾಟಿಸಲಿರುವರು. ಕೂರತ್ ಸಾದತ್ ಅಸೈಯ್ಯದ್ ಫಝಲ್ ಕೊಯಮ್ ತಂಙಳ್ ದುವಾ ನೆರವೇರಿಸಲಿರುವರು.

ಎ.28ರಂದು ಮಗ್ರಿಬ್ ನಮಾಝ್ ಬಳಿಕ ಅಸ್ಮ ಉಲ್ ಹುಸ್ನಾ ದಿಕ್ರ್ ಮಜ್ಲಿಸ್ ಕಾರ್ಯಕ್ರಮ ಜರಗಲಿದೆ. ರಾತ್ರಿ 10ಗಂಟೆಗೆ ಅಂತಾರಾಜ್ಯ ಮಟ್ಟದ ದಫ್ ಸ್ಪರ್ಧೆ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News