ಮೂಡುಬಿದಿರೆ : ಎ.18ರಿಂದ ಸಾವಿರ ಕಂಬ ಬಸದಿ ರಥೋತ್ಸವ

Update: 2019-04-16 17:06 GMT

ಮೂಡುಬಿದಿರೆ : ಸಾವಿರಕಂಬದ ಬಸದಿ ಎಂದು ಪ್ರಸಿದ್ಧಿಯಾಗಿರುವ ಮೂಡುಬಿದಿರೆಯ ತ್ರಿಭುವನ ತಿಲಕ ಚೂಡಾಮಣಿ ಬಸದಿಯ ಕಿರಿಯ ರಥೋತ್ಸವ, 2618ನೇ ಮಹಾವೀರ ಜಯಂತ್ಯುತ್ಸವ ಎ.18ರಂದು ಹಾಗೂ ಹಿರಿಯ ರಥೋತ್ಸವ, ಶ್ರಮಣ ಸಂಸ್ಕೃತಿ ಸಮ್ಮೇಳನ ಎ.19ರಂದು  ನಡೆಯಲಿದೆ ಎಂದು ಮೂಡುಬಿದಿರೆ ಶ್ರೀಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

18ರಂದು ರಾತ್ರಿ 7ಗಂಟೆಗೆ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯುವ ಮಹಾವೀರ ಜಯಂತ್ಯುತ್ಸವವನ್ನು ಹರ್ಯಾಣದ ಸುನೀಲ್ ಜೈನ್ ಉದ್ಘಾಟಿಸ ಲಿದ್ದು, ಮೂಡುಬಿದಿರೆಯ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷ ಯುವರಾಜ್ ಜೈನ್ ಶ್ರೀಮಹಾವೀರ ಜ್ಯೋತಿ ಬೆಳಗಿಸಲಿದ್ದಾರೆ.

ಮಾಜಿ ಸಚಿವ ಕೆ.ಅಭಯಚಂದ್ರ ಜೈನ್ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಸಂಶೋಧಕ ಡಾ.ಪಿ.ಜಿ ಕೆಂಪಣ್ಣವರ್ ಪ್ರಧಾನ ಉಪನ್ಯಾಸ ನೀಡಲಿರುವರು. ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ವಕೀಲ ಎಲ್.ಡಿ ಬಲ್ಲಾಳ್, ಎಸ್.ಡಿ ಸಂಪತ್ ಸಾಮ್ರಾಜ್ಯ, ಬೋಜೇ ಪಾಟೀಲ್ ಗೋವಾ ಮುಖ್ಯ ಅತಿಥಿಗಳಾಗಿರು ವರು. ರಾತ್ರಿ 8.30ರಿಂದ ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಾಪಕ ವೃಂದದವರಿಂದ ಯಕ್ಷಗಾನ ವೈಭವ ನಡೆಯಲಿದೆ. ಬಳಿಕ ಬಸದಿಯಲ್ಲಿ ಕಿರಿಯ ರಥೋತ್ಸವ ನಡೆಯಲಿದೆ.

ಎ.19ರಂದು ರಾತ್ರಿ 7.15ಕ್ಕೆ ಶ್ರಮಣ ಸಂಸ್ಕøತಿ ಸಮ್ಮೇಳನವನ್ನು ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲ ಉದ್ಘಾಟಿಸಲಿದ್ದಾರೆ. ಭಾರತೀಯ ಜೈನ್ ಮಿಲನ್ ವಲಯ 8ರ ಅಧ್ಯಕ್ಷ ಪುಷ್ಪರಾಜ್ ಜೈನ್ ಶ್ರಮಣಜ್ಯೋತಿ ಬೆಳಗಿಸುವರು. ಕೆನರಾ ಬಸ್ ಮಾಲಕರ ಸಂಘದ ಜಿಲ್ಲಾಧ್ಯಕ್ಷ ಕೆ.ರಾಜವರ್ಮ ಬಲ್ಲಾಳ್, ಉದ್ಯಮಿ ಶೈಲೇಂದ್ರ ಕುಮಾರ್ ಮುಖ್ಯ ಅತಿಥಿಗಳಾಗಿದ್ದು, ಪುಂಜಾಲ್‍ಕಟ್ಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಗಣಪತಿ ಭಟ್ ಕುಳಮರ್ಮ ಪ್ರಧಾನ ಉಪನ್ಯಾಸ ನೀಡಲಿದ್ದಾರೆ.

ಸಭಾ ಕಾರ್ಯಕ್ರಮದ ಬಳಿಕ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮವನ್ನು ದ.ಕ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಉದ್ಘಾಟಿಸಲಿರುವರು. ಧವಲತ್ರಯ ಜೈನಕಾಶಿ ಟ್ರಸ್ಟ್ ಪ್ರಾಯೋಜಕತ್ವದಲ್ಲಿ ಸ್ವಸ್ತಿಶ್ರೀ ಜೈನ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ವೈವಿದ್ಯಮ ಕಾರ್ಯಕ್ರಮ ಹಾಗೂ ಸೌಮ್ಯ ಬಿ.ಎಸ್ ಅವರಿಂದ `ಭಗವಾನ್ ಮಹಾವೀರರ ವಾಣಿ' ಯಕ್ಷಗಾನ ರೂಪಕ ನಡೆಯಲಿದೆ. ಬಳಿಕ ಹಿರಿಯ ರಥೋತ್ಸವ ನಡೆಯಲಿದೆ. 

ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ:

ಶ್ರಮಣ ಸಂಸ್ಕೃತಿ ಸಮ್ಮೇಳನದ ಸಭಾ ಕಾರ್ಯಕ್ರಮದಲ್ಲಿ ಡಿ.ಎನ್ ಅಕ್ಕಿಗೋಗಿ( ಸಂಶೋಧನೆ ಹಾಗೂ ಸಾಹಿತ್ಯಕ್ಷೇತ್ರ), ಅಜಿತ್ ಮುರಗೊಂಡ (ಸಮಾಜಸೇವೆ), ಶ್ವೇತಾ ಜೈನ್ ( ಸಮಾಜಸೇವೆ) ಅವರಿಗೆ ಸ್ವಸ್ತಿಶ್ರೀ ಭಟ್ಟಾರಕ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಭಟ್ಟಾರಕಶ್ರೀ ತಿಳಿಸಿದರು.

ಬಸದಿಗಳ ಮೊಕ್ತೇಸರರಾದ ಪಟ್ನಶೆಟ್ಟಿ ಸುಧೇಶ್ ಕುಮಾರ್, ದಿನೇಶ್ ಆನಡ್ಕ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News