ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಮತದಾನ ಆರಂಭ

Update: 2019-04-18 04:51 GMT

ಉಡುಪಿ, ಎ.18: ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಮತದಾನ ಉಡುಪಿ ಜಿಲ್ಲೆಯಲ್ಲಿ ಬಿರುಸಿನ ಆರಂಭ ಪಡೆದಿದೆ.

ಜಿಲ್ಲೆಯಲ್ಲಿ ಬಿಸಿಲು ಮತ್ತು ಸೆಕೆಯ ಪ್ರತಾಪ ಜೋರಾಗಿರುವುದರಿಂದ ಬೆಳಗ್ಗೆಯಿಂದಲೇ ಮತದಾರರು ದೊಡ್ಡ ಸಂಖ್ಯೆಯಲ್ಲಿ ಮತದಾನಕ್ಕೆ ಬಂದರು.

ಬೆಳಿಗ್ಗೆ 7 ಗಂಟೆಗೆ ಮತದಾನ ಪ್ರಾರಂಭಗೊಂಡಾಗ ಉದ್ದನೆಯ ಸಾಲು ಎಲ್ಲಾ ಮತಗಟ್ಟೆಗಳ ಮುಂದೆ ಕಂಡುಬಂದವು. ಜನರು ಕುಟುಂಬ ಸಮೇತರಾಗಿ ಮತದಾನಕ್ಕಾಗಿ ಮತಗಟ್ಟೆಗಳತ್ತ ತೆರಳುತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೃಹ್ಮಾವರದ ನಿರ್ಮಲಾ ಹೈಸ್ಕೂಲಿನ ಎರಡು ಸಖಿ ಮತಗಟ್ಟೆಗಳಲ್ಲಿ ಒಂದು ಗಂಟೆಯೊಳಗೆ 200 ಮಂದಿ ತಮ್ಮ ಮತದಾನದ ಹಕ್ಕು ಚಲಾಯಿಸಿದ್ದರು. ಪುತ್ತೂರು ಶಾಲೆಯಲ್ಲಿ ‌ಫರ್ಲಾಂಗ್ ಉದ್ದದ ಕ್ಯೂ ಕಂಡುಬಂದರೆ ನಿಟ್ಪೂರು ಹೈಸ್ಕೂಲ್ ಮತಗಟ್ಟೆಯಲ್ಲಿ 100ಕ್ಕೂ ಅಧಿಕ ಮಂದಿ ಕ್ಯೂ ನಿಂತಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News