ಲೋಕ ಸಭಾ ಚುನಾವಣೆ: ಬಂಟ್ವಾಳದಲ್ಲಿ ಗಣ್ಯರಿಂದ ಮತದಾನಕ್ಕೆ ಚಾಲನೆ

Update: 2019-04-18 03:43 GMT

ಬಂಟ್ವಾಳ: ಹಿರಿಯ ಕಾಂಗ್ರೆಸ್ ಮುಖಂಡ ಮಾಜಿ ಕೇಂದ್ರ ಸಚಿವ ಬಿ.ಜನಾರ್ದನ ಪೂಜಾರಿ ಅವರು ಎಸ್.ವಿ.ಎಸ್.ದೇವಳ ಶಾಲೆಯಲ್ಲಿ ಮತ ಚಲಾಯಿಸಿದರು.

ಅವರು ಪತ್ನಿ ಮಾಲತಿ ಪೂಜಾರಿ ಜೊತೆ ಸುಮಾರು 6.30ರ ವೇಳೆ ಆಗಮಸಿ ಸರತಿ ಸಾಲಿನಲ್ಲಿ ನಿಂತು ಪ್ರಥಮವಾಗಿ ಹಕ್ಕು ಚಲಾಯಿಸಿದರು. ಬಳಿಕ ಮಾತನಾಡಿದ ಅವರು ರಾಹುಲ್ ಗಾಂಧಿ ಅವರು ಪ್ರಧಾನಿಯಾಗಬೇಕು ಎಂಬ ಇಚ್ಚೆ ಯನ್ನು ವ್ಯಕ್ತಪಡಿಸಿದರು. ಆದರೆ ಎಲ್ಲವೂ ದೇವರ ಇಚ್ಚೆ ಎಂದರು.

ಪ್ರತಿಯೊಬ್ಬರು ಕಡ್ಡಾಯವಾಗಿ ಮತದಾನ ಮಾಡುವಂತೆ ಮನವಿ ಮಾಡಿದರು. ಕಳೆದ ಹಲವು ವರ್ಷಗಳಿಂದ ಪೂಜಾರಿ ಅವರು ಸರತಿ ಸಾಲಿನಲ್ಲಿ ನಿಂತು ಪ್ರಥಮ‌ ಮತಚಲಾಯಿಸುವುದನ್ನು ರೂಡಿ ಮಾಡಿಕೊಂಡಿದ್ದಾರೆ. ಇಂದು ಕೂಡಾ ಪ್ರಥಮ ವಾಗಿ ಮತ ಚಲಾಯಿಸಿದರು.

ಮಾಜಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ತೊಡಂಬಿಲ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆಯಲ್ಲಿ ಮತಚಲಾಯಿಸಿದರು.

ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿ, ಬೆಳಗ್ಗೆ 7ಗಂಟೆಯಿಂದಲೇ ಕೈರಂಗಳ ಬೂತ್ ನಿಂದ ತಿರುಗಾಟ ಆರಂಭಿಸಿದ್ದೇನೆ. ದೇಶದಲ್ಲಿ ಯಾವುದೇ ಅಭಿವೃದ್ಧಿ ಆಗದ ಹಿನ್ನೆಲೆಯಲ್ಲಿ ಜನರು ಬದಲಾವಣೆಯನ್ನು ಬಯಸುತ್ತಿದ್ದಾರೆ ಎಂದು ರೈ ಹೇಳಿದರು.

ಕೈಕೊಟ್ಟ ಮತಯಂತ್ರ

ಬಂಟ್ವಾಳ ತಾಲೂಕಿನ ಅಮ್ಟಾಡಿ ಗ್ರಾ.ಪಂ.ವ್ಯಾಪ್ತಿಯ ನಲ್ಕೆಮಾರ್ ಶಾಲೆಯಲ್ಲಿ ಮತದಾನದ ಯಂತ್ರ ಕೆಟ್ಟುಹೊಗಿದ್ದು ಮತದಾನ ಪ್ರಕ್ರಿಯೆ ಇನ್ನೂ ಕೂಡಾ ಆರಂಭವಾಗಿಲ್ಲ.

ಭಾಗ ಸಂಖ್ಯೆ 52, ಕ್ರ.ಮ.ಸಂಖ್ಯೆ 328 ಬೂತ್ ನ ಒಂದು ಕೊಠಡಿಯ ಮತಯಂತ್ರ ಕೆಟ್ಟುಹೊಗಿದ್ದು ಮತದಾನಕ್ಕಾಗಿ ಬಂದವರು ಕೆಲವರು ಕಾದು ಕಾದು ಸುಸ್ತಾದರೆ ಇನ್ನು ಹಿರಿಯ ವ್ಯಕ್ತಿಗಳು ವಾಪಾಸು ಮನೆಗೆ ಹೋಗುವಂತಾಯಿತು. ಅದೇ ರೀತಿ ಕಾವಳಮೂಡೂರು, ಪುದು, ಅಮ್ಟೂರುನಲ್ಲಿ ಬದಲಿ ಯಂತ್ರ ಅಳವಡಿಸಲು ಅಧಿಕಾರಿಗಳು ಕ್ರಮ ಕೈಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News