ದ.ಕ.ಲೋಕಸಭಾ ಕ್ಷೇತ್ರ: ಶೇ.48.85 ಮತದಾನ

Update: 2019-04-18 08:44 GMT

ಮಂಗಳೂರು, ಎ.18: ದ.ಕ. ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಶೇ.48.85 ಮತದಾನವಾಗಿದೆ.

ಕೆಲವು ಕಡೆ ಮತಯಂತ್ರಗಳಲ್ಲಿ ಲೋಪದೋಷ ಕಂಡುಬಂದಿದೆ. ಉಪ್ಪಿನಂಗಡಿಯ ಮಠ ಹಿರ್ತಡ್ಕ ಮತಗಟ್ಟೆಯಲ್ಲಿ ಕಾಂಗ್ರೆಸ್ - ಎಸ್ಡಿಪಿಐ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದಿರುವುದು ಬಿಟ್ಟರೆ ಉಳಿದಂತೆ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ.

ಮಧ್ಯಾಹ್ನ 1 ಗಂಟಗೆ ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 48.36, ಮೂಡುಬಿದಿರೆಯಲ್ಲಿ ಶೇ.48.55, ಮಂಗಳೂರು ಉತ್ತರದಲ್ಲಿ ಶೇ.47.24, ಮಂಗಳೂರು ದಕ್ಷಿಣದಲ್ಲಿ ಶೇ.43.34, ಮಂಗಳೂರು ಕ್ಷೇತ್ರದಲ್ಲಿ ಶೇ.45.80, ಬಂಟ್ವಾಳದಲ್ಲಿ ಶೇ.50.60, ಪುತ್ತೂರಿನಲ್ಲಿ 51.66 ಹಾಗೂ ಸುಳ್ಯದಲ್ಲಿ ಶೇ.53.13 ಮತದಾನವಾಗಿದೆ.

* ಪೂರ್ವಾಹ್ನ 11: ಶೇ.32.34 ಮತದಾನ

ದ.ಕ.ಲೋಕಸಭಾ ಕ್ಷೇತ್ರಕ್ಕೆ ನಡೆಯುತ್ತಿರುವ ಚುನಾವಣೆಯಲ್ಲಿ ಪೂರ್ವಾಹ್ನ 11ರ ವೇಳೆಗೆ ಶೇ.32.34 ಮತದಾನವಾಗಿದೆ. ಕೆಲವು ಕಡೆ ಮತಯಂತ್ರದಲ್ಲಿ ಲೋಪದೋಷ ಕಂಡು ಬಂದಿದೆ. ಉಳಿದಂತೆ ಎಲ್ಲಾ ಕಡೆ ಶಾಂತಿಯುತ ಮತದಾನವಾಗಿದೆ.

ಪೂ.11ರ ವೇಳೆಗೆ ಬೆಳ್ತಂಗಡಿ ವಿಧಾನ ಸಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ. 33.80, ಮೂಡುಬಿದಿರೆಯಲ್ಲಿ ಶೇ.31.65, ಮಂಗಳೂರು ಉತ್ತರದಲ್ಲಿ ಶೇ.31.91, ಮಂಗಳೂರು ದಕ್ಷಿಣದಲ್ಲಿ ಶೇ.29.63, ಮಂಗಳೂರು ಕ್ಷೇತ್ರದಲ್ಲಿ ಶೇ.31.33, ಬಂಟ್ವಾಳದಲ್ಲಿ ಶೇ.33.89, ಸುಳ್ಯದಲ್ಲಿ ಶೇ.33.65 ಮತದಾನವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News