ಹಿರ್ತಡ್ಕ: ಕಾಂಗ್ರೆಸ್ - ಎಸ್ಡಿಪಿಐ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ

Update: 2019-04-18 07:31 GMT

ಉಪ್ಪಿನಂಗಡಿ: ಮಠ ಹಿರ್ತಡ್ಕ ಮತಗಟ್ಟೆಯಲ್ಲಿ ಕಾಂಗ್ರೆಸ್ - ಎಸ್ಡಿಪಿಐ ಕಾರ್ಯಕರ್ತರ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ವರದಿಯಾಗಿದೆ.

206ರ ಮತಗಟ್ಟೆ ಸಂಖ್ಯೆ 41ರಲ್ಲಿ ಎಸ್ಡಿಪಿಐ ಕಾರ್ಯಕರ್ತನೋರ್ವ ನಿರ್ಬಂಧಿತ ವ್ಯಾಪ್ತಿಯ ಮತಗಟ್ಟೆಯ ಗೇಟ್ ಬಳಿ ಮತಯಾಚಿಸಿದ್ದ ಎನ್ನಲಾ ಗಿದ್ದು, ಇದಕ್ಕೆ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದ್ದು, ಈ ಸಂದರ್ಭ ಪರಸ್ಪರ ಮಾತಿನ ಚಕಮಕಿ ನಡೆದಿದ್ದು, ಬಳಿಕ ಪೊಲೀಸರು ಆಗಮಿಸಿ ಗುಂಪನ್ನು ಚದುರಿಸಿದರು ಎಂದು ತಿಳಿದುಬಂದಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News