ಲೋಕಸಭಾ ಚುನಾವಣೆ: ಕಡಬದಲ್ಲಿ ಬಿರುಸಿನ ಮತದಾನ

Update: 2019-04-18 07:02 GMT

ಕಡಬ, ಎ.18. ಲೋಕಸಭಾ ಚುನಾವಣೆಗೆ ಮತದಾನ ಆರಂಭಗೊಂಡಿದ್ದು, ಎಲ್ಲಡೆ ಬಿರುಸಿನ ಮತದಾನ ನಡೆಯುತ್ತಿದೆ.

ಕೋಡಿಂಬಾಳ ಗ್ರಾಮದ ಓಂತ್ರಡ್ಕ ಬೂತ್ ನಲ್ಲಿ ಬಿರುಸಿನ ಮತದಾನ ನಡೆಯುತ್ತಿದ್ದು, ಮತಯಂತ್ರ ಕೈಕೊಟ್ಟು ಸುಮಾರು 20 ನಿಮಿಷಗಳ ಕಾಲ ಮತದಾನ ಸ್ಥಗಿತಗೊಂಡಿತು‌. ಕಡಬ ಗ್ರಾಮದ ಬೂತ್ ಸಂಖ್ಯೆ 90 ರಲ್ಲಿ ಮಹಿಳೆಯರಿಂದಲೇ ನಿರ್ವಹಿಸಲ್ಪಡುವ 'ಸಖಿ' ಮತಗಟ್ಟೆಯನ್ನು ನಿರ್ಮಿಸಲಾಗಿತ್ತು.

ರಕ್ತದೊತ್ತಡ ಕಡಿಮೆಯಾಗಿ ಕೊಂಬಾರು ಗ್ರಾಮದ ಮುಗೇರು ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಡಿಕೇರಿ ಮೂಲದ ಪೊಲೀಸ್ ಸಿಬ್ಬಂದಿ ಶ್ರೀನಿವಾಸ್ (42) ಕುಸಿದು ಬಿದ್ದಿದ್ದು, ತಲೆಗೆ ಗಾಯವಾಗಿದೆ. ಗಂಭೀರ ಸ್ವರೂಪದ ಗಾಯಗೊಂಡ ಇವರನ್ನು ಕಡಬ ಸಮುದಾಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ನಡುವೆ ಬಿಳಿನೆಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಹೋಂ ಗಾರ್ಡ್ ಹಾಗೂ ಪಂಚಾಯತ್ ಸಿಬ್ಬಂದಿಯೋರ್ವರು ಹೊಟೇಲ್ ನಿಂದ ತರಿಸಿದ ಆಹಾರ ಸೇವಿಸಿ ಅಸ್ವಸ್ಥಗೊಂಡ ಪರಿಣಾಮ ಕಡಬ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News