ಮಂಗಳೂರು: ಎ. 20ರಂದು ಮುಸ್ಲಿಮ್ ಯುವತಿರಿಗೆ ‘ಕರಿಯರ್ ಗೈಡೆನ್ಸ್ ಶಿಬಿರ’

Update: 2019-04-19 11:20 GMT

ಮಂಗಳೂರು: ಪಿಯುಸಿ ಮತ್ತು ಪದವಿ ಕಲಿತಿರುವ/ಕಲಿಯುತ್ತಿರುವ ಮುಸ್ಲಿಮ್ ಯುವತಿಯರಿಗೆ ಉತ್ತಮ ಕೋರ್ಸ್ ನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ ‘ಕರಿಯರ್ ಗೈಡೆನ್ಸ್ ಶಿಬಿರ’ವನ್ನು ಮಂಗಳೂರಿನ ಹಿದಾಯ-ಮೆಸ್ಕೊ ಅರಬಿಕ್ ಅಕಾಡಮಿ ಹಮ್ಮಿಕೊಂಡಿದೆ.

ನಗರದ ಹಂಪನಕಟ್ಟೆಯ ಮಸ್ಜಿದುನ್ನೂರ್ ಬಳಿಯಲ್ಲಿರುವ ಐಎಂಎ (ಇಂಡಿಯನ್ ಮೆಡಿಕಲ್ ಅಸೋಸಿಯೇಶನ್) ಸಭಾಂಗಣದಲ್ಲಿ ಎ. 20ರಂದು ಮಧ್ಯಾಹ್ನ  2ಗಂಟೆಗೆ ನಡೆಯಲಿರುವ ಈ ಮಾರ್ಗದರ್ಶನ ಶಿಬಿರದಲ್ಲಿ ಮುಸ್ಲಿಮ್ ಯುವತಿಯರು ಮತ್ತವರ ಪಾಲಕರು ಭಾಗವಹಿಸಬಹುದಾಗಿದೆ.

ಪ್ರವೇಶ ಉಚಿತವಾಗಿದ್ದು, ಆಸಕ್ತರು ದೂರವಾಣಿ ಸಂ. 0824 - 4261319, 8951302476ಗೆ ಕರೆಮಾಡಿ ಹೆಸರು ನೋಂದಾಯಿಸಬಹುದಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News