ಟೋಪ್ಕೋ ಮೊದಲ ಮತದಾನದ ಸವಿ ನೆನಪು: ಗಿಡನೆಟ್ಟ ಯುವ ಮತದಾರರಿಗೆ ಸ್ಮರಣಿಕೆ ವಿತರಣೆ

Update: 2019-04-19 11:28 GMT

ಪುತ್ತೂರು ಮತ್ತು ವಿಟ್ಲದಲ್ಲಿ ಕಾರ್ಯಾಚರಿಸುತ್ತಿರುವ ಟೋಪ್ಕೋ ಝಮ್ ಝಮ್ ಜ್ಯುವೆಲ್ಲರಿಯು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಮತದಾನದಂದು 18 ವರ್ಷ ತುಂಬಿದ ಮೊದಲ ಯುವ ಮತದಾರರಿಗೆ ವಿಶಿಷ್ಟ ಕಾರ್ಯಕ್ರಮವೊಂದನ್ನು ಆಯೋಜಿಸಿತ್ತು.

ಮತದಾನ ಮಾಡಿ ಅದರ ಸವಿ ನೆನಪಿಗೆ ಗಿಡನೆಟ್ಟು ಪೋಷಿಸುವವರು ಅದರ ಜೊತೆ ಸೆಲ್ಫಿ ಫೋಟೋವನ್ನು ಟೋಪ್ಕೋಗೆ ವಾಟ್ಸ್ಆ್ಯಪ್ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ಗುರುವಾರ ಮತದಾನ ಮಾಡಿದ ಮೊದಲ ಯುವ ಮತದಾರರು ಗಿಡನೆಟ್ಟು ಸೆಲ್ಫಿ ತೆಗೆದು ಕಳುಹಿಸಿದ್ದರು. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮಂಗಳೂರು, ಬಂಟ್ವಾಳ, ಸುಳ್ಯ, ಬೆಳ್ತಂಗಡಿ ಮೊದಲಾದ ಪ್ರದೇಶಗಳಿಂದ ಇನ್ನೂರಕ್ಕೂ ಅಧಿಕ ಯುವ ಮತದಾರರು ಟೋಪ್ಕೋ ಝಮ್ ಝಮ್ ನ ವಿಶೇಷ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪರಿಸರ ಪ್ರೇಮ ಮೆರೆದರು.

ಮತದಾನ ಮಾಡಿ ಗಿಡನೆಟ್ಟ ಯುವ ಮತದಾರರಿಗೆ ಟೋಪ್ಕೋ ವತಿಯಿಂದ ಶುಕ್ರವಾರ ವಿಶೇಷ ಕೊಡುಗೆ ವಿತರಿಸಲಾಯಿತು. ಬಂಟ್ವಾಳ ತಾಲೂಕಿನ ಮಂಚಿಯ ಕೆ.ಎಂ. ನಯನಾ ಅವರಿಗೆ ಸ್ಮರಣಿಕೆ ನೀಡುವ ಮೂಲಕ ದ.ಕ. ಜಿಲ್ಲಾ ವಕ್ಫ್ ಸಮಿತಿ ಸದಸ್ಯರಾದ ರಶೀದ್ ವಿಟ್ಲ ಅವರು ಉದ್ಘಾಟಿಸಿದರು.

ಈ ಸಂದರ್ಭ ಟೋಪ್ಕೋ ಜ್ಯುವೆಲ್ಲರಿಯ ಸಾದಿಕ್, ಅಶ್ರಫ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News