ಎ. 23ರಿಂದ ‘ಮಂಗಳೂರು ಜಿಐಒ’ ವತಿಯಿಂದ ಬೇಸಿಗೆ ರಜಾದಿನ ಶಿಬಿರ

Update: 2019-04-19 13:20 GMT

ಮಂಗಳೂರು: ಮಂಗಳೂರು ಗರ್ಲ್ಸ್ ಇಸ್ಲಾಮಿಕ್ ಆರ್ಗನೈಝೇಶನ್ (ಜಿಐಒ) ‘ಅಲ್ಲಾಹನೆಡೆಗೆ ಧಾವಿಸಿರಿ’ ಎಂಬ ಧ್ಯೇಯವಾಕ್ಯದಡಿಯಲ್ಲಿ ಇಸ್ಲಾಮಿಕ್ ರಜಾದಿನ ಶಿಬಿರವನ್ನು ಆಯೋಜಿಸಿದೆ.

ಶಿಬಿರವು ಎ. 23ರಿಂದ ಎ. 29ರ ವರೆಗೆ ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಹಿದಾಯತ್ ಸೆಂಟರ್ ನಲ್ಲಿ ನಡೆಯಲಿದ್ದು, ಶಿಬಿರದಲ್ಲಿ 13ರಿಂದ 28 ವರ್ಷ ವಯಸ್ಸಿನ ಬಾಲಕಿರು, ಯುವತಿಯರು ಭಾಗವಹಿಸಬಹುದಾಗಿದೆ.

ಶಿಬಿರದಲ್ಲಿ ಕುರ್ ಆನ್, ಹದೀಸ್ ತರಗತಿಗಳು, ಪಿಪಿಟಿ ಪ್ರದರ್ಶನ, ನೈತಿಕ ಮೌಲ್ಯಕ್ಕೆ ಸಂಬಂಧಿಸಿದ ತರಗತಿಗಳು ಪ್ರಭಾವಿಗಳ ಜೀವನ ವೃತ್ತಾಂತ, ಸ್ಪರ್ಧೆಗಳು, ಪಿಕ್ ನಿಕ್ ಮತ್ತಿತರ ಕಾರ್ಯಕ್ರಮಗಳು ಒಳಗೊಂಡಿವೆ.

ಶಿಬಿರ ಶುಲ್ಕ 300 ರೂ. ಆಗಿದ್ದು, ಹೆಚ್ಚಿನ ಮಾಹಿತಿಗಾಗಿ 8105975157, 7406511300, 9611091696 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಲು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News