ಬ್ಯೂಟಿ ಪಾರ್ಲರ್ ಶೂಟೌಟ್: ಕಾಯರ್‍ಕಟ್ಟೆಯ ಮನೆಗೆ ಪೊಲೀಸರು ದಾಳಿ; ಮಾರಕಾಯುಧ ವಶ

Update: 2019-04-19 14:26 GMT

 ಮಂಜೇಶ್ವರ : ಕೊಚ್ಚಿ ಪನಂಬಳ್ಳಿ ನಗರದಲ್ಲಿರುವ ನಟಿ ಲೀನಾ ಮರಿಯಾ ಪೌಲ್ ಅವರ ಮಾಲಕತ್ವದಲ್ಲಿರುವ ಬ್ಯೂಟಿ ಪಾರ್ಲರ್‍ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಕ್ರೈಂಬ್ರಾಂಚ್  ಆರಂಭಿಸಿದ ಕಾರ್ಯಾಚರಣೆಯಂತೆ ಮಂಜೇಶ್ವರ ಪೈವಳಿಕೆ ಸಮೀಪದ ಕಾಯರ್‍ಕಟ್ಟೆಯ ಮನೆಯೊಂದಕ್ಕೆ ದಾಳಿ ನಡೆಸಿ ಅಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಅಪಾರ ಪ್ರಮಾಣದ ಮಾರಕಾಯುಧಗಳನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡಿದ್ದಾರೆ.

ವಶಪಡಿಸಿದ ಮಾಲುಗಳಲ್ಲಿ ಪಿಸ್ತೂಲು, ತಲ್ವಾರುಗಳು, ಸ್ಪ್ರಿಂಗ್ ಚಾಕು ಮತ್ತಿತರ ಆಯುಧಗಳು ಹಾಗು ಹಲವು ಮೊಬೈಲ್‍ಗಳು ಮತ್ತು ವಾಹನಗಳ ಹಲವು ನಂಬ್ರ ಪ್ಲೇಟ್‍ಗಳೂ ಒಳಗೊಂಡಿವೆ ಎಂದು ಕ್ರೈಂಬ್ರಾಂಚ್ ತಿಳಿಸಿದೆ. 

ಬ್ಯೂಟಿ ಪಾರ್ಲರ್‍ಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿ ಸುಫಾರಿ ತಂಡಕ್ಕೆ ಸೇರಿದ ಪೆರುಂಬಾವೂರಿನ ಬಿಲಾಲ್ ಸಹಿತ ಇಬ್ಬರನ್ನು ಕ್ರೈಂಬ್ರಾಂಚ್ ಕೆಲವು ದಿನಗಳ ಹಿಂದೆ ಬಂಧಿಸಿತ್ತು. ಆ ಪೈಕಿ ಬಿಲಾಲ್‍ನನ್ನು ಕ್ರೈಂಬ್ರಾಂಚ್ ತೀವ್ರ ವಿಚಾರಣೆಗೊಳಪಡಿಸಿದಾಗ ಆತ ನೀಡಿದ ಮಾಹಿತಿಯಂತೆ ಪೈವಳಿಕೆ ಮನೆಗೆ ದಾಳಿ ನಡೆಸಿ ಮಾರಕಾಯುಧಗಳನ್ನು ವಶಪಡಿಸಲಾಗಿದೆ ಎಂದು ಕ್ರೈಂಬ್ರಾಂಚ್ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News