ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ.75.91 ಮತದಾನ

Update: 2019-04-19 16:28 GMT

ಉಡುಪಿ, ಎ.19: ಉಡುಪಿ-ಚಿಕ್ಕಮಗಳೂರು ಲೋಕಸಭಾ ಸ್ಥಾನಕ್ಕಾಗಿ ಗುರುವಾರ ನಡೆದ ಮತದಾನದ ವೇಳೆ ಕ್ಷೇತ್ರದಲ್ಲಿ ಶೇ.75.91ರಷ್ಟು ಮತದಾನ ವಾಗಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ.

ಜಿಲ್ಲಾವಾರು ಸಾಧನೆ ಗಮನಿಸಿದರೆ ಉಡುಪಿ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.78.18ರಷ್ಟು ಮತದಾನವಾಗಿದೆ. ಅದೇ ರೀತಿ ಚಿಕ್ಕಮಗಳೂರಿನ ನಾಲ್ಕು ವಿಧಾನಸಭಾ ವ್ಯಾಪ್ತಿಯಲ್ಲಿ ದಾಖಲಾಗಿರುವ ಮತದಾನ ಶೇ.73.62 ಆಗಿದೆ. 2014ರ ಲೋಕಸಭಾ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.74.56ರಷ್ಟು ಮತದಾನವಾಗಿತ್ತು. ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇ.1.35ರಷ್ಟು ಅಧಿಕ ಮತದಾನವಾಗಿದೆ.

ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿರುವ ಅಧಿಕೃತ ಮಾಹಿತಿಯಂತೆ ಕ್ಷೇತ್ರದ ಒಟ್ಟು 15,13,231 ಮತದಾರರಲ್ಲಿ 11,48,700 ಮಂದಿ ನಿನ್ನೆ ಮತ ಚಲಾಯಿಸಿದ್ದಾರೆ. ಕ್ಷೇತ್ರದ 7,38,503 ಪುರುಷ ಮತದಾರರಲ್ಲಿ 5,63,050 ಮಂದಿ ಹಾಗೂ 7,74,674 ಮಹಿಳಾ ಮತದಾರರಲ್ಲಿ 5,85,645 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶೇ.76.24ರಷ್ಟು ಪುರುಷರು ಮತ ಚಲಾಯಿಸಿದ್ದರೆ, ಶೇ.75.60ರಷ್ಟು ಮಹಿಳಾ ಮತದಾರು ತಮ್ಮ ಮತ ಚಲಾಯಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿರುವ ಅಧಿಕೃತ ಮಾಹಿತಿಯಂತೆ ಕ್ಷೇತ್ರದ ಒಟ್ಟು 15,13,231 ಮತದಾರರಲ್ಲಿ 11,48,700 ಮಂದಿ ನಿನ್ನೆ ಮತ ಚಲಾಯಿಸಿದ್ದಾರೆ. ಕ್ಷೇತ್ರದ 7,38,503 ಪುರುಷ ಮತದಾರರಲ್ಲಿ 5,63,050 ಮಂದಿ ಹಾಗೂ 7,74,674 ಮಹಿಳಾ ಮತದಾರರಲ್ಲಿ 5,85,645 ಮಂದಿ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ. ಶೇ.76.24ರಷ್ಟು ಪುರುಷರು ಮತ ಚಲಾಯಿಸಿದ್ದರೆ, ಶೇ.75.60ರಷ್ಟು ಮಹಿಳಾ ಮತದಾರರು ತಮ್ಮ ಮತ ಚಲಾಯಿಸಿದ್ದಾರೆ. ಕ್ಷೇತ್ರದಲ್ಲಿರುವ 54 ಇತರೆ ಮತದಾರರಲ್ಲಿ ಕೇವಲ ಐವರು ಮಾತ್ರ ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ ಎಂದು ಈ ಮಾಹಿತಿ ತಿಳಿಸುತ್ತದೆ.

ಕುಂದಾಪುರದಲ್ಲಿ ಇಬ್ಬರಲ್ಲಿ ಒಬ್ಬರು, ಮೂಡಿಗೆರೆಯಲ್ಲಿ 9ಮಂದಿಯಲ್ಲಿ ಒಬ್ಬರು, ಚಿಕ್ಕಮಗಳೂರಿನ 23 ಮಂದಿಯಲ್ಲಿ ಮೂವರು ತಮ್ಮ ಮತ ಚಲಾಯಿಸಿ ದ್ದಾರೆ. ಇವರ ಮತದಾನದ ಪ್ರಮಾಣ ಶೇ.9.26 ಆಗಿದೆ. ಮಾತ್ರ.

ಈ ಬಾರಿ ಗರಿಷ್ಠ ಮತದಾನದ ದಾಖಲೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ವ್ಯಾಪ್ತಿಯಲ್ಲಿ ದಾಖಲಾಗಿದೆ. ಅಲ್ಲಿ ಶೇ.78.86ರಷ್ಟು ಮತದಾನ ದಾಖಲಾಗಿದ್ದರೆ, ಕನಿಷ್ಠ ಮತದಾನದ ದಾಖಲೆ ಚಿಕ್ಕಮಗಳೂರು ಕ್ಷೇತ್ರಕ್ಕೆ ಸಲ್ಲುತ್ತದೆ. ಅಲ್ಲಿ ಶೇ.69.45 ಮಂದಿ ಮಾತ್ರ ಮತ ಚಲಾಯಿಸಿದ್ದಾರೆ. ಉಡುಪಿ ಜಿಲ್ಲೆಯಲ್ಲಿ ಕನಿಷ್ಠ ಈ ಬಾರಿ ಕುಂದಾಪುರ ಕ್ಷೇತ್ರದಲ್ಲಿ ಶೇ.77.66 ದಾಖಲಾಗಿದೆ. ಉಳಿದಂತೆ ಕಾರ್ಕಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಶೇ.78.39, ಉಡುಪಿಯಲ್ಲಿ 78.77, ಕಾಪುವಿನಲ್ಲಿ ಶೇ.77.89ರಷ್ಟು ಮತದಾನವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿ ಶೇ.74.79, ತರೀಕೆರೆಯಲ್ಲಿ 72.18ರಷ್ಟು ಮತದಾನವಾಗಿದೆ.

ಕುಂದಾಪುರ ವಿಧಾನಸಭಾ ವ್ಯಾಪ್ತಿಯ ಒಟ್ಟು 2,03,279 ಮತದಾರರ ಪೈಕಿ 1,57,863 ಮಂದಿ ಮತದಾನ ಮಾಡಿದ್ದರೆ, ಉಡುಪಿ ಕ್ಷೇತ್ರದ 2,09,504 ಮತದಾರರಲ್ಲಿ 1,65,033 ಮಂದಿ ಮತ ಚಲಾಯಿಸಿದ್ದಾರೆ. ಕಾಪು ಕ್ಷೇತ್ರದ 1,84,101 ಮಂದಿಯಲ್ಲಿ 1,43,403 ಮಂದಿ, ಕಾರ್ಕಳ ಕ್ಷೇತ್ರದ 1,83,528 ಮಂದಿಯಲ್ಲಿ 1,43,865 ಮಂದಿ ತಮ್ಮ ಹಕ್ಕು ಚಲಾಯಿಸಿದ್ದಾರೆ.

ಇನ್ನು ಶೃಂಗೇರಿ ಕ್ಷೇತ್ರದಲ್ಲಿದ್ದ 1,65,498 ಮಂದಿ ಮತದಾರರಲ್ಲಿ 1,30,509 ಮಂದಿ, ಮೂಡಿಗೆರೆಯ 1,68,774 ಮಂದಿಯಲ್ಲಿ 1,26,225 ಮಂದಿ, ಚಿಕ್ಕಮಗಳೂರು ಕ್ಷೇತ್ರದ 2,14,9584 ಮಂದಿ ಮತದಾರರಲ್ಲಿ 1,49,228ಮಂದಿ ಹಾಗೂ ತರೀಕೆರೆ ಕ್ಷೇತ್ರದ 1,83,589 ಮಂದಿ ಮತದಾರ ರಲ್ಲಿ 1,32,514 ಮಂದಿ ತಮ್ಮ ಮತವನ್ನು ಚಲಾಯಿಸಿದ್ದಾರೆ.

ಪ್ರತಿ ಕ್ಷೇತ್ರದಲ್ಲಿ ಪುರುಷ ಮತ್ತು ಮಹಿಳೆಯರು ಮತದಾನ ಮಾಡಿದ ಪ್ರಮಾಣ

ಕುಂದಾಪುರ:  ಪುರುಷರು: 97,692(ಮತ ಚಲಾಯಿಸಿದವರು 74,119) ಮಹಿಳೆಯರು: 1,05,585(83,743), ಇತರೇ: 02(01), ಒಟ್ಟು: 2,03,279 (1,57,863),ಶೇ. 77.66.

ಉಡುಪಿ: ಪುರುಷರು:1,01,386(79,393),ಮಹಿಳೆಯರು: 1,08,116 (85,640), ಇತರೇ: 02(0), ಒಟ್ಟು: 2,09,504 (1,65,033), ಶೇ.78.77.

ಕಾಪು: ಪುರುಷರು: 87,704(67,320), ಮಹಿಳೆಯರು: 96,384 (76,083), ಇತರೇ: 13(0), ಒಟ್ಟು: 1,84,101 (1,43,403), ಶೇ. 77.89.

ಕಾರ್ಕಳ: ಪುರುಷರು: 87,915 (68,300), ಮಹಿಳೆಯರು: 95,612 (75,565), ಇತರೇ: 1(0), ಒಟ್ಟು: 1,83,528(1,43,865), ಶೇ. 78.39.

ಶೃಂಗೇರಿ: ಪುರುಷರು: 81,605(65,481), ಮಹಿಳೆಯರು: 83,889 (65,028), ಇತರೇ: 04(0), ಒಟ್ಟು: 1,65,498 (1,30,509), ಶೇ. 78.86.

ಪುರುಷರು: 81,605(65,481), ಮಹಿಳೆಯರು: 83,889 (65,028), ಇತರೇ: 04(0), ಒಟ್ಟು: 1,65,498 (1,30,509), ಶೇ. 78.86.

ಮೂಡಿಗೆರೆ: ಪುರುಷರು: 83,054 (63,772), ಮಹಿಳೆಯರು: 85,711 (62,452), ಇತರೇ: 09(01), ಒಟ್ಟು: 1,68,774 (1,26,225), ಶೇ. 74.79.

ಚಿಕ್ಕಮಗಳೂರು: ಪುರುಷರು: 1,06,964(75,893), ಮಹಿಳೆಯರು: 1,07,971(73,392), ಇತರೇ: 23(03), ಒಟ್ಟು: 2,14,958 (1,49,288), ಶೇ.69.45.

ತರೀಕೆರೆ: ಪುರುಷರು: 92,183 (68,772), ಮಹಿಳೆಯರು: 91,406 (63,742), ಇತರೇ: 0(0), ಒಟ್ಟು:1,83,589 (1,32,514), ಶೇ. 72.18.

ಕ್ಷೇತ್ರದ ಸಾಧನೆ: ಪುರುಷರು:7,38,503 (5,63,050), ಮಹಿಳೆಯರು: 7,74,674 (5,85,645), ಇತರೇ: 54 (05), ಒಟ್ಟು: 15,13,231 (11,48,700), ಸರಾಸರಿ ಮತದಾನ: ಶೇ. 75.91.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News