ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್(ರಿ) ಗೆ ಚಾಲನೆ

Update: 2019-04-19 16:32 GMT

ಪುತ್ತೂರು,ಎ.19: ರಾಜ್ಯದ ಮಹಿಳಾ ಶರೀಅತ್ ಕಾಲೇಜುಗಳ ಶೈಕ್ಷಣಿಕ ಮಾರ್ಗದರ್ಶನ ಮತ್ತು ಸಿಲೆಬಸ್ ಏಕೀಕರಣವನ್ನು ಲಕ್ಷ್ಯವಾಗಿಟ್ಟು ಪ್ರಮುಖ  ವಿದ್ವಾಂಸರು ಮತ್ತು ಶಿಕ್ಷಣ ತಜ್ಞರ ನಾಯಕತ್ವದಲ್ಲಿ ಇತ್ತೀಚೆಗೆ "ವಿಮೆನ್ಸ್ ಇಸ್ಲಾಮಿಕ್ ಎಜುಕೇಶನ್ ಕೌನ್ಸಿಲ್" ಗೆ ಕುಂಬ್ರದಲ್ಲಿ ಚಾಲನೆ ನೀಡಲಾಯಿತು.

ಪಠ್ಯಕ್ರಮಗಳ ಸಮಗ್ರತೆ, ಪರೀಕ್ಷೆ ಮತ್ತು ಮೌಲ್ಯಮಾಪನಗಳ ಏಕೀಕರಣ, ಶಿಕ್ಷಣ ಗುಣಮಟ್ಟದ ಮೇಲ್ವಿಚಾರಣೆ, ಶಿಕ್ಷಕರ ತರಬೇತಿ, ಪ್ರಾಯೋಗಿಕ ಪಠ್ಯೇತರ ಚಟುವಟಿಕೆಗಳು, ದಅವಾ ಟ್ರೈನಿಂಗ್, ಅಂತರ್ಕಾಲೇಜು ಮಟ್ಟದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಧ್ಯಾತ್ಮಿಕ ಸಮಾರಂಭಗಳು ಮುಂತಾದವು ಕೌನ್ಸಿಲ್ ನ ಅಧೀನದಲ್ಲಿ ನಡೆಸಲಾಗುವುದು. ಈಗಾಗಲೇ ರಾಜ್ಯದ ವಿವಿಧ ಜಿಲ್ಲೆಗಳ ಹಲವು ಮಹಿಳಾ ಧಾರ್ಮಿಕ ಸಂಸ್ಥೆಗಳು ಕೌನ್ಸಿಲ್ ನ ಅಂಗೀಕಾರ ಪಡೆದಿದ್ದು, ಆಸಕ್ತ ಸಂಸ್ಥೆಗಳಿಗೆ 'ಅಫಿಲಿಯೇಷನ್' ನೀಡಲಾಗುವುದು.

ಸುಲ್ತಾನುಲ್ ಉಲಮಾ ಕಾಂತಪುರಂ ಎ.ಪಿ.ಅಬೂಬಕರ್ ಮುಸ್ಲಿಯಾರ್ ಇದರ ಮುಖ್ಯ ಪೋಷಕರಾಗಿದ್ದು, ಕರ್ನಾಟಕ ಜಂಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷ ತಾಜುಲ್ ಫುಖಹಾ ಬೇಕಲ್ ಇಬ್ರಾಹಿಂ ಮುಸ್ಲಿಯಾರ್ ಪೋಷಕರಾಗಿರುವರು. ಡಾ.ಅಬ್ದುಲ್ ಹಕೀಂ ಅಝ್ಹರಿ, ಮಂಗಳೂರು ಯುನಿವರ್ಸಿಟಿ ಕುಲಸಚಿವ ಡಾ. ಪ್ರೊ.ಎ.ಎಂ.ಖಾನ್ ಮುಂತಾದ ವರು ಸಲಹೆಗಾರರಾಗಿದ್ದು ಮಾರ್ಗದರ್ಶನ ನೀಡುವರು ಎಂದು ಪ್ರಕಟನೆ ತಿಳಿಸಿದೆ.

ಈ ಕುರಿತು ಕುಂಬ್ರ ಮರ್ಕಝುಲ್ ಹುದಾ ಸಭಾಂಗಣದಲ್ಲಿ ಸೇರಿದ ಸಭೆಯಲ್ಲಿ ಕರ್ನಾಟಕ ಸುನ್ನೀ ಕೊಅರ್ಡಿನೇಷನ್ ಸಮಿತಿ ಕೋಶಾಧಿಕಾರಿ ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ ಅಧ್ಯಕ್ಷತೆ ವಹಿಸಿ, ಮರ್ಕಝುಲ್ ಹುದಾ ಮಹಿಳಾ ಶರಿಯಾ ಕಾಲೇಜ್ ಪ್ರಿನ್ಸಿಪಾಲ್ ಯು.ಕೆ ಮುಹಮ್ಮದ್ ಸಅದಿ ವಳವೂರು ಉದ್ಘಾಟಿಸಿದರು. ಡಾ.ಎಮ್ಮೆಸ್ಸೆಂ ಝೈನೀ ಕಾಮಿಲ್ ಕೌನ್ಸಿಲ್ ನ ಕಾರ್ಯ ಚಟುವಟಿಕೆಗಳನ್ನು ವಿವರಿಸಿದರು.

ಉಮರ್ ಸಖಾಫಿ ಎಡಪ್ಪಾಲ, ಜಲೀಲ್ ಸಖಾಫಿ ಜಾಲ್ಸೂರ್, ಅಶ್ರಫ್ ಸಖಾಫಿ ಕಕ್ಕಿಂಜೆ, ಇರ್ಫಾನ್ ನೂರಾನಿ ಪಂಪ್ವೆಲ್,ಹನೀಫ್ ಸಖಾಫಿ ಕೆಸಿ ರೋಡ್, ಹಬೀಬ್ ಸಖಾಫಿ ಕಾಟಿಪಳ್ಳ ಸೇರಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News