ದೇವಸ್ಥಾನದ ಜಾತ್ರೆ ಸಂದರ್ಭ ನೂಕುನುಗ್ಗಲು: 7 ಮಂದಿ ಮೃತ್ಯು

Update: 2019-04-21 15:18 GMT

ಚೆನ್ನೈ, ಎ.21: ತಮಿಳುನಾಡಿನ ತುರೈಯೂರ್ ಬಳಿಯ ಮುತ್ತಯ್ಯಂಪಾಳ್ಯಂ ನಗರದ ಕರುಪ್ಪನಸಾಮಿ ದೇವಸ್ಥಾನದಲ್ಲಿ ಚಿತ್ರಪೌರ್ಣಮಿ ಜಾತ್ರೆಯಂದು ನೂಕುನುಗ್ಗಲು ಹಾಗೂ ಕಾಲ್ತುಳಿತದಿಂದ 7 ಮಂದಿ ಮೃತಪಟ್ಟ ಘಟನೆ ನಡೆದಿದೆ.

 ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆಯ ಅಂಗವಾಗಿ ವಿಶೇಷ ಪೂಜೆ ನಡೆದ ಬಳಿಕ ಭಕ್ತರಿಗೆ ಪ್ರಸಾದದ ರೂಪವಾಗಿ ನಾಣ್ಯ ಹಂಚುವುದು ಇಲ್ಲಿಯ ವೈಶಿಷ್ಟವಾಗಿದೆ. ನಾಣ್ಯವನ್ನು ಹೆಕ್ಕಲು ಭಕ್ತರು ನೂಕುನುಗ್ಗಲು ನಡೆಸಿದಾಗ ಕಾಲ್ತುಳಿತಕ್ಕೆ ಸಿಲುಕಿ 7 ಜನ ಮೃತಪಟ್ಟಿದ್ದಾರೆ. ಮೃತಪಟ್ಟವರನ್ನು ಲಕ್ಷ್ಮೀಕಾಂತನ್ (60 ವರ್ಷ), ಕೆ.ರಾಜವೇಲ್(55 ವರ್ಷ), ಎಸ್. ಗಾಂಧಯಿ(38 ವರ್ಷ), ಎ.ಶಾಂತಿ(50 ವರ್ಷ), ರಾಮರ್ (50 ವರ್ಷ), ವಿ. ಪೂಂಗಾವನಮ್(50 ವರ್ಷ) ಹಾಗೂ ಆರ್. ವಲ್ಲಿ (35 ವರ್ಷ) ಎಂದು ಗುರುತಿಸಲಾಗಿದೆ. ಮೃತಪಟ್ಟವರು ಕರೂರ್, ಕುಡ್ಡಲೂರು, ನಮಕ್ಕಲ್ , ಸೇಲಂ ಹಾಗೂ ವಿಲ್ಲುಪುರಂ ಜಿಲ್ಲೆಯ ನಿವಾಸಿಗಳಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News