ಗುಜರಾತ್‌ನ ಈ ಗ್ರಾಮದಲ್ಲಿ ಚುನಾವಣಾ ಪ್ರಚಾರ ಇಲ್ಲ

Update: 2019-04-21 16:56 GMT

ರಾಜ್‌ಕೋಟ್ (ಗುಜರಾತ್), ಎ. 21: ಗುಜರಾತ್‌ನ ರಾಜ್ಸಮಧಿಯಾಲಾ ಗ್ರಾಮದ ಗ್ರಾಮಾಭಿವೃದ್ಧಿ ಸಮಿತಿ ಚುನಾವಣಾ ಪ್ರಚಾರಕ್ಕೆ ನಿಷೇಧ ಜಾರಿಗೆ ತಂದಿದೆ.

ಗ್ರಾಮಾಭಿವೃದ್ಧಿ ಸಮಿತಿ ಈ ನಿಯಮ ಸೇರಿದಂತೆ ಹಲವು ನಿಯಮಗಳನ್ನು ಜಾರಿಗೆ ತಂದಿದೆ. ಯಾವುದೇ ನಿಯಮಗಳ ಉಲ್ಲಂಘನೆಗೆ ದಂಡವನ್ನು ಕೂಡ ಸಮಿತಿ ವಿಧಿಸುತ್ತಿದೆ. ‘‘ಪರಿಸರ ಪ್ರಕ್ಷುಬ್ದಗೊಳ್ಳುತ್ತದೆ ಎಂಬ ಕಾರಣಕ್ಕೆ ಚುನಾವಣಾ ಪ್ರಚಾರಕ್ಕೆ ನಿಷೇಧ ವಿಧಿಸಲಾಗಿದೆ. ಇದನ್ನು ರಾಜಕೀಯ ಪಕ್ಷಗಳು ಕೂಡ ಅರ್ಥ ಮಾಡಿಕೊಂಡಿವೆ ಹಾಗೂ ಬೆಂಬಲ ನೀಡಿವೆ’’ ಎಂದು ಗ್ರಾಮದ ಸರಪಂಚ್ ಅಶೋಕ್ ಭಾ ವೇರಾ ತಿಳಿಸಿದ್ದಾರೆ.

‘‘ಮತದಾನ ಮಾಡದೇ ಇದ್ದವರಿಗೆ 51 ರೂಪಾಯಿ ದಂಡ ವಿಧಿಸಲಾಗುವುದು. ಪ್ರತಿ ಬಾರಿ ಶೇ. 100 ಮತದಾನವಾಗಲು ನಾವು ಪ್ರಯತ್ನಿಸುತ್ತೇವೆ. ಆದರೆ, ಶೇ. 95-96ರ ವರೆಗೆ ಮತದಾನವಾಗುತ್ತಿದೆ’’ ಎಂದು ಅವರು ತಿಳಿಸಿದ್ದಾರೆ. ವೈಫೈ ಮೂಲಕ ಇಂಟರ್‌ನೆಟ್ ಸಂಪರ್ಕ, ಸಿಸಿಟಿವಿ ಕ್ಯಾಮೆರಾ, ಕುಡಿಯುವ ನೀರಿಗಾಗಿ ಆರ್‌ಒ ಘಟಕ ಮೊದಲಾದ ಅತ್ಯಾಧುನಿಕ ಸೌಲಭ್ಯಗಳನ್ನು ಈ ಗ್ರಾಮ ಹೊಂದಿದ್ದು, ಗ್ರಾಮಸ್ಥರ ಬದುಕನ್ನು ಸುಗಮಗೊಳಿಸಿದೆ. ಅಲ್ಲಿ, ಇಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಿಸಾಡುವುದನ್ನು ನಿಷೇಧಿಸಲಾಗಿದೆ. ಈ ನಿಯಮ ಉಲ್ಲಂಘಿಸಿದರೆ ದಂಡ ವಿಧಿಸಲಾಗುತ್ತದೆ ಎಂದು ವೇರಾ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News