ಕರ್ಕರೆ ವಿರುದ್ಧ ಪ್ರಜ್ಞಾ ಸಿಂಗ್ ಹೇಳಿಕೆ ಅತ್ಯಂತ ಕೀಳು ಮಟ್ಟದ್ದು: ಮಾಜಿ ಡಿಜಿಪಿಗಳ ಆಕ್ರೋಶ

Update: 2019-04-21 17:42 GMT

ಮುಂಬೈ,ಎ.21: 26/11ರ ಮುಂಬೈ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ಮಾಜಿ ಮಹಾರಾಷ್ಟ್ರ ಎಟಿಎಸ್ ಮುಖ್ಯಸ್ಥ ಹೇಮಂತ ಕರ್ಕರೆ ವಿರುದ್ಧ ಭೋಪಾಲಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಮಾಲೇಗಾಂವ್ ಸ್ಪೋಟದ ಆರೋಪಿ ಪ್ರಜ್ಞಾ ಸಿಂಗ್ ಠಾಕೂರ್ ಅವರ ಹೇಳಿಕೆಯನ್ನು ಎಂಟು ಮಾಜಿ ಡಿಜಿಪಿಗಳುರವಿವಾರ ಕಟುವಾಗಿ ಖಂಡಿಸಿದ್ದಾರೆ.

ಠಾಕೂರ್ ಮಧ್ಯಪ್ರದೇಶದಲ್ಲಿ ಪ್ರಚಾರದ ಸಂದರ್ಭ ಮಾಲೇಗಾಂವ್ ಪ್ರಕರಣದ ತನಿಖೆ ವೇಳೆ ತನಗೆ ಚಿತ್ರಹಿಂಸೆ ನೀಡಿದ್ದಕ್ಕಾಗಿ ತನ್ನ ಶಾಪದಿಂದಾಗಿಯೇ ಕರ್ಕರೆಕೊಲ್ಲಲ್ಪಟ್ಟಿದ್ದರು ಎಂದು ಹೇಳಿಕೊಂಡಿದ್ದರು.

“ಠಾಕುರ್ ಅವರ ಅತ್ಯಂತ ಕೀಳು ಮಟ್ಟದ್ದ ಮತ್ತು ವಿಷಾದನೀಯ ಹೇಳಿಕೆಯು ಸ್ವಾತಂತ್ರಾನಂತರ ದೇಶಾದ್ಯಂತ 35,000 ಪೊಲೀಸ್ ಸಿಬ್ಬಂದಿಗಳು ತಮ್ಮ ಕರ್ತವ್ಯದ ಸಂದರ್ಭದಲ್ಲಿಜೀವಗಳನ್ನು ನೀಡುವ ಮೂಲಕ ಮಾಡಿದ್ದ ಪರಮೋಚ್ಚ ತ್ಯಾಗವನ್ನು ಸಾರ್ವಜನಿಕವಾಗಿ ಗುರುತಿಸುವ ಅಗತ್ಯವನ್ನು ಬಿಂಬಿಸಿದೆ” ಎಂದು ಮಾಜಿ ಡಿಜಿಪಿಗಳಾದಜುಲಿಯೋ ರಿಬೆರಿಯೊ, ಪ್ರಕಾಶ ಸಿಂಗ್,ಪಿ.ಕೆ.ಹಾರ್ಮಿಸ್ ಥರಕ್ಕನ್,ಕಮಲ ಕುಮಾರ, ಜಾಕೋಬ್ ಪುನ್ನೂಸ್,ಸಂಜೀವ ದಯಾಳ್,ಜಯಂತೊ ಚೌಧುರಿ ಮತ್ತುಎನ್.ರಾಮಚಂದ್ರನ್ ಅವರು ಹೊರಡಿಸಿರುವ ಜಂಟಿ ಹೇಳಿಕೆಯು ತಿಳಿಸಿದೆ.

ದೇಶವು ಕರ್ಕರೆಯವರಿಗೆ ಋಣಿಯಾಗಿದೆ ಮತ್ತು ಈ ಭಾವನೆಗೆ ಇದಕ್ಕೆ ವ್ಯತಿರಿಕ್ತವಾಗಿರುವ ಏನೇ ಆದರೂ ತೀವ್ರ ಖಂಡನೆಗೆ ಅರ್ಹವಾಗುತ್ತದೆ ಎಂದಿದ್ದಾರೆ.

ಕೇಂದ್ರದಲ್ಲಿ ಒಳ್ಳೆಯ ಹುದ್ದೆಯಲ್ಲಿದ್ದ ಕರ್ಕರೆ ಮಹಾರಾಷ್ಟ್ರಕ್ಕೆ ಮರಳದಿದ್ದರೆ ಬದುಕುಳಿಯುತ್ತಿದ್ದರು. ಆದರೆ ನಾವೆಲ್ಲ ಸುಖನಿದ್ರೆ ಮಾಡುವಂತಾಗಲು ಭಯೋತ್ಪಾದಕರಚಟುವಟಿಕೆಗಳನ್ನು ತಡೆಯುವ ಮತ್ತು ತನಿಖೆಗೊಳಪಡಿಸಲು ಎಟಿಎಸ್ ಜೊತೆ ಕೆಲಸ ಮಾಡುವ ನಿರ್ದಿಷ್ಟ ಉದ್ದೇಶವನ್ನು ಅವರು ಹೊಂದಿದ್ದರು ಎಂದು ಈ ನಿವೃತ್ತಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News