ಚುನಾವಣಾ ರ್ಯಾಲಿಯಲ್ಲಿ ಪ್ರಧಾನಿ ಮೋದಿ ನಿಂದನಾತ್ಮಕ ಪದ ಬಳಸಿದ್ದಾರೆ ಎನ್ನುವುದು ಸುಳ್ಳು

Update: 2019-04-22 08:57 GMT

ಹೊಸದಿಲ್ಲಿ, ಎ.22: ಟ್ವಿಟರ್ ನಲ್ಲಿ 70,000ಕ್ಕೂ ಅಧಿಕ ಫಾಲೋವರ್ಸ್ ಹೊಂದಿರುವ ಗೌರವ್ ಪಂಧಿ ಎಂಬವರು ಎಪ್ರಿಲ್ 21ರಂದು ವಿಡಿಯೋವೊಂದನ್ನು ಪೋಸ್ಟ್ ಮಾಡಿ ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ ಪಟಾನ್ ಎಂಬಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಮಾತನಾಡುವಾಗ ಅಸಂಸದೀಯ ಭಾಷೆ ಪ್ರಯೋಗಿಸಿದ್ದರೆಂದು ಟ್ವೀಟ್ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪ್ರಧಾನಿ ತಮ್ಮ ಹುದ್ದೆಯ ಘನತೆಗೆ ಧಕ್ಕೆ ತಂದಿದ್ದಾರೆ ಎಂದು ಭಾರೀ ಆಕ್ರೋಶ ವ್ಯಕ್ತವಾಗಿತ್ತು.

ಪ್ರಧಾನಿ ಉಪಯೋಗಿಸಿದ್ದ ಪದ ನಿಂದನಾತ್ಮಕ ಎಂದು ಹೇಳಿಕೊಂಡ ಗೌರವ್ ಪಂಧಿ, ಪ್ರಧಾನಿ ತಮ್ಮ ಹುದ್ದೆಯನ್ನು ಗೌರವಿಸುತ್ತಾರೆಯೇ ಎಂದೂ ಪ್ರಶ್ನಿಸಿದ್ದಾರೆ.

ಈ ನಿರ್ದಿಷ್ಟ ವೀಡಿಯೋವನ್ನು thequint.com ವೆಬ್ ತಾಣವು ಪ್ರಧಾನಿ ಗುಜರಾತ್ ನ ಪಟಾನ್ ಎಂಬಲ್ಲಿ ಉದ್ದೇಶಿಸಿದ ರ್ಯಾಲಿಯ ನೇರ ಪ್ರಸಾರದಿಂದ ತೆಗೆಯಲಾಗಿದ್ದು, ಈ ವೀಡಿಯೋ ಮೇಲೆ ‘Modi said BC at a rally' ಎಂದು ಬರೆಯಲಾಗಿತ್ತು.

ವಾಸ್ತವವೇನು ?

ಪಂಧಿ ಅವರು ಪೋಸ್ಟ್ ಮಾಡಿದ ವೀಡಿಯೋ ವೈರಲ್ ಆಗುತ್ತಿದ್ದಂತೆಯೇ ಪ್ರಧಾನಿ ಗುಜರಾತಿ ಆಡು ಭಾಷೆಯನ್ನು  ಉಪಯೋಗಿಸಿದ್ದಾರೆಯೇ ವಿನಃ ಅದರಲ್ಲೇನು ನಿಂದನಾತ್ಮಕ ಪದವಿಲ್ಲ ಎಂಬುದು ಸ್ಪಷ್ಟಗೊಂಡಿದೆ.

ಸೇಮು ಭಟ್ಟ್ ಎಂಬವರು ಹೇಳುವಂತೆ ಮೋದಿ ತಮ್ಮ ಭಾಷಣದಲ್ಲಿ “ಅನೆ ಹಾವೆ ಜೋ ಬಧಾ ಕೊ ಚೋ ಕೆ ಪಾನಿ ನಿ ಲಡಾಯಿ ತವಾನ್ ಚೆ ತೊ....'' ಎಂದು ಹೇಳಿದ್ದಾರೆ. ಇದರ ಅರ್ಥ ``ಯುದ್ಧಗಳು ನೀರಿನ ವಿಚಾರದಲ್ಲಿ ನಡೆಸಲಾಗುತ್ತದೆ ಎಂದು ಎಲ್ಲರೂ ಹೇಳುತ್ತಿದ್ದಾರೆ'' ಎಂದಾಗಿದೆ. ಆದರೆ ತಿರುಚಲ್ಪಟ್ಟ ವೀಡಿಯೋದಲ್ಲಿ ``ತಾವನ್ ಚೆ ತೋ'' ಎಂಬ ಪದವನ್ನು ಮೇಲಿಂದ ಮೇಲೆ ಹೇಳುವಂತೆ ತೋರಿಸಿ ಪ್ರಧಾನಿ ನಿಂದನಾತ್ಮಕವಾಗಿ ಮಾತನಾಡಿದ್ದಾರೆಂಬಂತೆ ಬಿಂಬಿಸಲಾಗಿದೆ. ತಾವನ್ ಚೆ ಎಂದರೆ ಸದ್ಯವೇ ನಡೆಯಲಿದೆ ಎಂಬರ್ಥವಾಗಿದೆ.

ಆದರೆ ವೈರಲ್ ವಿಡಿಯೋದಲ್ಲಿ ಪ್ರಧಾನಿ ನರೇಂದ್ರ ಮೋದಿ ನಿಂದನಾತ್ಮಕ ಪದ ಬಳಸಿದ್ದಾರೆ ಎನ್ನಲಾಗಿದೆ. ಈ ವಿಡಿಯೋವನ್ನು ಹಲವರು ಶೇರ್ ಮಾಡಿದ್ದಾರೆ. ಮೋದಿ ನಿಂದನಾತ್ಮಕ, ಕೀಳುಮಟ್ಟದ ಪದ ಬಳಸಿದ್ದಾರೆ ಎನ್ನುವುದು ಸಂಪೂರ್ಣ ಸುಳ್ಳು.

ಕೃಪೆ: thequint.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News