×
Ad

ಉಗ್ರರ ಮೇಲೆ ದಾಳಿಗೆ ಮೋದಿ 'ಅವರದ್ದೇ ವಾಯುಪಡೆ'ಯನ್ನು ಕಳುಹಿಸಿದ್ದರು ಎಂದ ಅಮಿತ್ ಶಾ

Update: 2019-04-22 21:46 IST

ಪಶ್ಚಿಮ ಬಂಗಾಳ, ಎ.22: ಪುಲ್ವಾಮ ದಾಳಿಯ ನಂತರ ಭಯೋತ್ಪಾದಕ ಶಿಬಿರಗಳ ಮೇಲೆ ದಾಳಿ ನಡೆಸಲು ಪ್ರಧಾನಿ ನರೇಂದ್ರ ಮೋದಿ ‘ತಮ್ಮ ವಾಯುಪಡೆ’ಯನ್ನು ಕಳುಹಿಸಿದರು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ ಎಂದು ಎಎನ್ ಐ ವರದಿ ಮಾಡಿದೆ.

“ಪುಲ್ವಾಮ ಭಯೋತ್ಪಾದಕ ದಾಳಿಯಲ್ಲಿ 44 ಯೋಧರು ಹುತಾತ್ಮರಾದರು. ಇದಕ್ಕೂ ಮೊದಲು ಇಂತಹ ಘಟನೆಗಳ ನಂತರ ಏನೂ ನಡೆಯುತ್ತಿರಲಿಲ್ಲ. ಘಟನೆಯ 13ನೆ ದಿನ ಪ್ರಧಾನಿ ನರೇಂದ್ರ ಮೋದಿ ‘ತಮ್ಮ ವಾಯುಪಡೆ’ಗೆ ದಾಳಿ ನಡೆಸಲು ಆದೇಶಿಸಿದರು ಎಂದು ಶಾ ಹೇಳಿದರು.

ಚುನಾವಣಾ ಪ್ರಚಾರಕ್ಕೆ ಸೇನೆಯ ಹೆಸರನ್ನು ಬಳಸಕೂಡದು ಎನ್ನುವ ಚು.ಆಯೋಗದ ಸೂಚನೆಯ ನಂತರ ಬಿಜೆಪಿ ಅಧ್ಯಕ್ಷರು ನೀಡಿರುವ ಈ ಹೇಳಿಕೆ ಭಾರೀ ವಿವಾದ ಸೃಷ್ಟಿಸುವ ಸಾಧ್ಯತೆಯಿದೆ. ಇದಕ್ಕೂ ಮೊದಲು ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್, ‘ಮೋದಿಜಿಯ ಸೇನೆ’ ಎಂದು ಹೇಳಿ ವಿವಾದ ಸೃಷ್ಟಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News