ಕಟೀಲು ಶ್ರೀದೇವಿಯ ಅವಭ್ರತೋತ್ಸವ

Update: 2019-04-22 18:15 GMT

ಮಂಗಳೂರು: ಪರಸ್ಪರ ದ್ವೇಷವುಳ್ಳವರು ಹೊಡೆದಾಡಿಕೊಳ್ಳುವುದು ಸರ್ವೇಸಾಮಾನ್ಯ. ಆದರೆ, ಯಾವುದೇ ದ್ವೇಷವಿಲ್ಲದೇ ಪರಸ್ಪರ ಬೆಂಕಿಯ ಪಂಜು ಹಿಡಿದುಕೊಂಡು ಒಬ್ಬರ ಮೇಲೊಬ್ಬರು ಎಸೆಯುತ್ತಾ ಹೊಡೆದಾಡಿಕೊಳ್ಳುವ ವಿಶಿಷ್ಟ ಜಾತ್ರೆಯೊಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದಿದೆ.

ಕಟೀಲು ಶ್ರೀದೇವಿಯ ಅವಭ್ರತೋತ್ಸವ (ಆರಟ). ಶತಮಾನಗಳಿಂದಲೂ ನಡೆದುಕೊಂಡು ಬಂದಿರುವ ಈ ಆಕರ್ಷಕ ಹಾಗೂ ರೋಮಾಂಚನಕಾರಿ ಆರಟ ಉತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸುತ್ತಾರೆ. ಯಾವುದೇ ರೀತಿಯ ದ್ವೇಷ ಇಲ್ಲಿ ಕಂಡುಬರುವುದಿಲ್ಲ. ಮೇಷ ಸಂಕ್ರಮಣ ದಿಂದ ಮೊದಲ್ಗೊಂಡು ಸುಮಾರು ಎಂಟು ದಿನಗಳ ಕಾಲ ಕಟೀಲು ಶ್ರೀ ದೇವಿ ವರ್ಷಾವಧಿ ಉತ್ಸವ ನಡೆಯುತ್ತದೆ. ಮೊದಲು ಏಳು ದಿನಗಳ ಕಾಲ ವಿವಿಧ ಧಾರ್ಮಿಕ ಕಾರ್ಯಕ್ರಮ ಗಳು ನಡೆದು ಕೊನೆಯ ದಿನ ಶ್ರೀದೇವಿಯು ಬ್ರಹ್ಮರಥಾರೂಢಳಾಗಿ ದೇವಳದ ರಥಬೀದಿಯಲ್ಲಿ ಸವಾರಿ ಮಾಡುತ್ತಾಳೆ.

ಶ್ರೀದೇವಿಯ ಸೇವಾ ರೂಪದಲ್ಲಿ ಅನಾದಿ ಕಾಲದಿಂದಲೂ ನಮ್ಮ ಹಿರಿಯರು ಈ ಅಗ್ನಿ ಕೇಳಿ ಆಟವನ್ನು ನಡೆಸಿಕೊಂಡು ಬರಲಾಗುತ್ತಿದೆ. ಅತ್ತೂರು ಹಾಗೂ ಕೊಡೆತ್ತೂರು ಈ ಎರಡೂ ಗ್ರಾಮದ ಜನರು ತಮಗೆ ಕಷ್ಟ ಕಾರ್ಪಣ್ಯಗಳು ಬಂದ್ರೆ ಹರಕೆ ರೂಪದಲ್ಲಿ ಈ ಸೇವೆಯನ್ನು ಸಲ್ಲಿಸುತ್ತಾರೆ. ಎರಡೂ ಗ್ರಾಮದ ಜನರೂ ಈ‌ ದಿನಗಳಲ್ಲಿ‌ ಸಾತ್ವಿಕ ಆಹಾರಗಳನ್ನು‌ ಸೇವಿಸಿ, ಮನೆಗೊಬ್ಬರಂತೆ ಈ ಸೇವಾ ಕೈಂಕರ್ಯದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಕೇವಲ ಸಾಂಕೇತಿಕ ದ್ವೇಷವನ್ನು ಪ್ರಕಟಗೊಳಿಸಲಾಗುತ್ತದೆ. ಆದರೆ, ಅಗ್ನಿ ಕೇಳಿಯ ಬಳಿಕ ಈ ದ್ವೇಷ ಮುಂದುವರಿಸುವುದಿಲ್ಲ ಎನ್ನುತ್ತಾರೆ ಅತ್ತೂರಿನ ಗ್ರಾಮಸ್ಥರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News