ಕಾಸರಗೋಡು ಪರಿಸರದಲ್ಲಿ ಭಾರೀ ಗಾಳಿ ಮಳೆ: ಮತದಾನ ಸ್ಥಗಿತ

Update: 2019-04-23 12:02 GMT

ಕಾಸರಗೋಡು :  ನೀಲೇಶ್ವರ ಸೇರಿದಂತೆ ಪರಿಸರದಲ್ಲಿ ಭಾರೀ ಗಾಳಿ ಮಳೆಗೆ ಹಲವೆಡೆ  ಮತದಾನ ಸ್ಥಗಿತಗೊಂಡಿದೆ.

ಬೀರಿಕುಳದಲ್ಲಿ  ಮೂರು ಮತಗಟ್ಟೆಗಳಲ್ಲಿ ಮತದಾನ ಸ್ಥಗಿತಗೊಳಿಸಲಾಗಿದೆ. ಸಂಜೆ ನಾಲ್ಕು ಗಂಟೆಗೆ ಭಾರೀ ಗಾಳಿ ಮಳೆ ಬಂದಿದ್ದು, ಮತಗಟ್ಟೆ ಕಾರ್ಯಾಚರಿಸುತ್ತಿದ್ದ  ಶಾಲಾ ಕಟ್ಟಡಕ್ಕೆ ಹಾನಿ ಉಂಟಾಗಿದ್ದು , ಇದರಿಂದ ಮತದಾನ ಸ್ಥಗಿತ ಗೊಳಿಸಲಾಯಿತು . ಮರದ ರೆಂಬೆ ಬಿದ್ದು ಓರ್ವ ಮಹಿಳೆ ಗಾಯಗೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News