×
Ad

ವಿವಿಪ್ಯಾಟ್‌ನಲ್ಲಿ ಹಾವು ಪ್ರತ್ಯಕ್ಷ !

Update: 2019-04-23 20:18 IST

ತಿರುವನಂತಪುರಂ, ಎ.23: ಕಣ್ಣೂರು ಲೋಕಸಭಾ ಕ್ಷೇತ್ರದಲ್ಲಿ ಮಂಗಳವಾರ ಅಪರೂಪದ ಅತಿಥಿಯೊಬ್ಬನಿಂದಾಗಿ ಮತದಾನ ಕೆಲ ಸಮಯ ಸ್ಥಗಿತಗೊಂಡ ಘಟನೆ ನಡೆದಿದೆ.

ಮಯ್ಯಿಲ್ ಕಂಡಕ್ಕಯ್ ಮತದಾನ ಕೇಂದ್ರದಲ್ಲಿದ್ದ ವಿವಿಪ್ಯಾಟ್‌ನಲ್ಲಿ ಬೆಳಿಗ್ಗೆ ಸಣ್ಣ ಹಾವೊಂದು ಕಂಡು ಬಂದಿದ್ದು ಮತದಾರರು, ಮತಗಟ್ಟೆ ಅಧಿಕಾರಿಗಳು ಆತಂಕಿತರಾದರು. ಇದರಿಂದ ಕೆಲ ಸಮಯ ಮತದಾನವನ್ನು ಸ್ಥಗಿತಗೊಳಿಸಲಾಯಿತು. ನಂತರ ಚುನಾವಣಾಧಿಕಾರಿ ಸ್ಥಳೀಯರೊಂದಿಗೆ ಸೇರಿ ಹಾವನ್ನು ಓಡಿಸಿದ ಬಳಿಕ ಮತದಾನ ಮುಂದುವರಿಯಿತು.

ಕಣ್ಣೂರು ಕ್ಷೇತ್ರದಲ್ಲಿ ಸಿಪಿಐ ಎಂ ನೇತೃತ್ವದ ಎಲ್‌ಡಿಎಫ್ ಅಭ್ಯರ್ಥಿ, ಹಾಲಿ ಸಂಸದ ಪಿಕೆ ಶ್ರೀಮತಿ, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಅಭ್ಯರ್ಥಿ ಕೆ ಸುರೇಂದ್ರನ್ ಮತ್ತು ಬಿಜೆಪಿ ನೇತೃತ್ವದ ಎನ್‌ಡಿಎ ಅಭ್ಯರ್ಥಿ ಸಿಕೆ ಪದ್ಮನಾಭನ್ ಮಧ್ಯೆ ಸ್ಪರ್ಧೆಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News