ಎ.24 ರಂದು ಎಸ್ಸೆಸ್ಸೆಫ್ ಬಂಟ್ವಾಳ ಡಿವಿಷನ್ ದಅವಾ ಕಾನ್ಫರೆನ್ಸ್

Update: 2019-04-23 14:57 GMT

ಬಂಟ್ವಾಳ,ಎ.23: ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ನಿರ್ದೇಶನದಂತೆ ನಡೆಸಲ್ಪಡುವ ದಅವಾ ಕಾನ್ಫರೆನ್ಸ್ ಬಂಟ್ವಾಳ ಡಿವಿಷನ್ ಮಟ್ಟದಲ್ಲಿ ಎಪ್ರಿಲ್ 24ˌ ಬುಧವಾರ ಬೆಳಗ್ಗೆ 10 ಗಂಟೆಗೆ ಕಲ್ಲಡ್ಕ ಸುನ್ನೀ ಸೆಂಟರ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮದಲ್ಲಿ Importance of Da-awa and organisation ಎಂಬ ವಿಷಯದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ದಅವಾ ವಿಂಗ್ ಕನ್ವೀನರ್ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ತರಗತಿ ಮಂಡಿಸಲಿದ್ದಾರೆ. ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಇಬ್ರಾಹೀಂ ಸಖಾಫಿ ಸೆರ್ಕಳ, ಪ್ರ.ಕಾರ್ಯದರ್ಶಿ ಶರೀಫ್ ನಂದಾವರˌ ಕಾರ್ಯದರ್ಶಿ ರಶೀದ್ ವಗ್ಗ, ಬಂಟ್ವಾಳ ಡಿವಿಷನ್ ಅಧ್ಯಕ್ಷ ಅಕ್ಬರ್ ಅಲೀ ಮದನಿ ಆಲಂಪಾಡಿ ಹಾಗೂ ಡಿವಿಷನ್ ಕಾರ್ಯದರ್ಶಿ ಹಾರಿಸ್ ಪೆರಿಯಪಾದೆ, ಕೋಶಾಧಿಕಾರಿ ಅಲೀ ಮದನಿ ಸೆರ್ಕಳ ಸೇರಿ ಅನೇಕರು ಭಾಗವಹಿಸಲಿದ್ದಾರೆ.

ಬಂಟ್ವಾಳ ಡಿವಿಷನ್ ನ ಬಂಟ್ವಾಳ, ಪಾಣೆಮಂಗಳೂರು, ಕಲ್ಲಡ್ಕ, ಮಂಚಿ ಸೆಕ್ಟರ್ ವ್ಯಾಪ್ತಿಯಲ್ಲಿ ಒಟ್ಟು 43 ಶಾಖೆಗಳಿದ್ದು, ಪ್ರತೀ ಶಾಖೆಯ ಎಲ್ಲಾ ಮುತಅಲ್ಲಿಂ ಹಾಗೂ ಮುಅಲ್ಲಿಮರು ಈ ಕ್ಯಾಂಪ್ ನ ಸದುಪಯೋಗ ಪಡೆಯಬೇಕೆಂದು ಪ್ರಕಟನೆಯಲ್ಲಿ ಕೋರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News